ವಾರ ವಾರವೂ ಬರೆಯುವುದು ಲೇಖಕನಿಗೆ ಸಿಗಬಹುದಾದ ಬಹುದೊಡ್ಡ ಶಿಸ್ತುಬದ್ಧ ಸ್ವಾತಂತ್ರ್ಯ. ಅದಕ್ಕೆ ವಾರ ವಾರ ಮನಸ್ಸನ್ನು ಹದಗೊಳಿಸಿಕೊಳ್ಳುವುದು, ಪಕ್ಷವಾಗಿ ಸಿದ್ಧವಾಗುವುದು ಕೂಡ ಒಂದು ಹಿತಾನುಭವವೇ. ಬರೆದಂತೆಲ್ಲ ಬೇಗ ಖಾಲಿಯಾಗಿ ಬಿಡುತ್ತದೆ. ವಾರವಾರ ತುಂಬಿಕೊಳ್ಳಬೇಕೆಂದರೆ, ವಾರವಾರ ಓದಬೇಕು, ತಿರುಗಬೇಕು, ಹುಡುಕಬೇಕು, ಸಂದರ್ಶಿಸಬೇಕು, ಚರ್ಚಿಸಬೇಕುಈ ವಾರ ಮುಗಿಯುತ್ತಿದ್ದಂತೆ ಪುನಃ ಮುಂದಿನ ವಾರಕ್ಕೆ ಅಣಿಯಾಗಬೇಕು. ಈ ತಿರುಗಣೆಯಲ್ಲೇ ಗಿರಕಿ ಹೊಡೆಯಬೇಕು. ಅಷ್ಟಾಗಿಯೂ ಸುಸ್ತಾಗಬಾರದು ಮತ್ತು ಓದುಗರನ್ನು ಸುಸ್ತು ಹೊಡೆಸಬಾರದು. ಇವೆಲ್ಲವೂ ನಿಖರವಾಗಿ, ನಿರಾಯಾಸವಾಗಿ, ನಿರುದ್ವಿಗ್ನವಾಗಿ, ನೀಟಾಗಿ ನಡೆಯುತ್ತಿರಬೇಕು. ಆಗ ಓದುವ ಮನಸ್ಸೂ ನಿರುಮ್ಮಳ. ಪುಸ್ತಕವೂ ನಮ್ಮ ಮನಸ್ಸಿನೊಳಗೆ ಅಕ್ಷರ ವಿಚಾರಗಳನ್ನು 'ಉಫ್' ಎಂದು ಊದುವ, ಓದುಗೊಳವೆಯಲ್ಲವೇ? ಇಲ್ಲಿನ ಬರಹಗಳೂ ಈ ಮನಸ್ಥಿತಿಯವು ಎಂದು ವಿಶ್ವೇಶ್ವರ ಭಟ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE