‘ಕಾಣದ ಕೈಯಲ್ಲಿ ಕಾಣುವ ಆರೋಗ್ಯ’ ಕೃತಿಯು ಪ್ರಸನ್ನ ಕುಮಾರ್ ಕೆ. ಅವರ ಲೇಖನ ಸಂಕಲನವಾಗಿದೆ. ಇಲ್ಲಿನ ಪರಿವಿಡಿಯಲ್ಲಿ ಬಹುಪಾಲು ವಿಷಯಗಳ ಬಗ್ಗೆ ಆಳವಾದ ಅಧ್ಯಯನವಿದೆ ಎಂಬುದನ್ನು ಗ್ರಹಿಸಬಹುದು. ರೋಗ ಕೇವಲ ಪರಾವಲಂಬಿ ಜೀವಿಗಳಿಂದ ಬರುವುದಿಲ್ಲ. ವ್ಯಕ್ತಿ ತನ್ನ ಸಂಬಂಧವನ್ನು ಕುಟುಂಬ ಸಮಾಜ ಕಾರ್ಯಕ್ಷೇತ್ರಗಳೊಂದಿಗೆ ಸುಮಧುರವಾಗಿಟ್ಟುಕೊಳ್ಳಬೇಕು. ಚಿಕಿತ್ಸೆ ರೋಗಿಗೆ, ರೋಗಕ್ಕಲ್ಲ. ವ್ಯಕ್ತಿಯ ವೈಯುಕ್ತಿಕತೆಗೆ ಚಿಕಿತ್ಸೆ; ರೋಗಕ್ಕೊಂದು ಔಷಧ ಕೊಡುವುದು ಚಿಕಿತ್ಸಾ ಪದ್ಧತಿಯಲ್ಲ. ಇವೇ ಮುಂತಾದ ಮೂಲಮಂತ್ರಗಳನ್ನು ಈ ಕೃತಿ ಸಮರ್ಥವಾಗಿ ಬಿಂಬಿಸುತ್ತದೆ.
ಇವರು ಮೂಲತಃ ಸುಳ್ಯ ತಾಲೂಕಿನ ಪಂಜದವರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಂಜದಲ್ಲಿ ಪ್ರಾಥಮಿಕ ಶಿಕ್ಷಣ. ವಿದ್ಯಾಬೋಧಿನಿ ಪ್ರೌಢಶಾಲೆ, ಬಾಳಿಲದಲ್ಲಿ ಪ್ರೌಢ ಶಿಕ್ಷಣ, ಶ್ರೀ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದು ಹೋಮಿಯೋಪಥಿ ಪದವಿ ಶಿಕ್ಷಣವನ್ನು (BIMS) ಮಂಗಳೂರಿನ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಪಡೆದರು. ಹೋಮಿಯೋಪಥಿ ಪದವಿ ಶಿಕ್ಷಣದಲ್ಲಿ (1994-1999) ಮಂಗಳೂರು ವಿಶ್ವವಿದ್ಯಾನಿಲಯ ದಿಂದ ಪ್ರಥಮ ರ್ಯಾಂಕ್ ಗಳಿಸಿ; ಅಖಿಲ ಭಾರತ ಹೋಮಿಯೋಪಥಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದರು. ಮುಂದೆ ಸ್ನಾತಕೋತ್ತರ ಪದವಿಯನ್ನು (MD-Homoeopathy) ಹೈದರಾಬಾದ್‌ನ ಸರಕಾರಿ ...
READ MORE