`ದಿವ್ಯ ಚಿಕಿತ್ಸೆ’ ( ಆರೋಗ್ಯಕ್ಕೆ ಹೆಬ್ಬಾಗಿಲು) ಎಂ. ಆರ್. ಮಂದಾರವಲ್ಲಿ ಅವರ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; ಈಗ ಎಲ್ಲಿ ನೋಡಿದರಲ್ಲಿ ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಹೋಟೆಲ್‌ಗಳು, ದೊಡ್ಡ ದೊಡ್ಡ ಮಾಲ್‌ಗಳು. ಆರೋಗ್ಯಕ್ಕಾಗಿ, ಸಂತೋಷಕ್ಕಾಗಿ ಮನುಷ್ಯ ಹಪಹಪಿಸುತ್ತಿದ್ದಾನೆ. ತಾನು ನೆಮ್ಮದಿಯಿಂದ, ಖುಷಿಯಿಂದ ಇರಬೇಕು, ಜಾಸ್ತಿ ವರ್ಷ ಬದುಕಬೇಕು, ಆರೋಗ್ಯದಿಂದ ಇರಬೇಕು ಇದಕ್ಕಾಗಿ ಏನು ಮಾಡುವುದಕ್ಕೂ ಸಿದ್ಧ, ಎಷ್ಟೇ ಹಣ ಖರ್ಚಾದರೂ ಸರಿ ಎನ್ನುವ ಧೋರಣೆ. ತಾನು ಹುಡುಕುತ್ತಿರುವುದು ಹೊರಗೆಲ್ಲೋ ಇದೆ ಎಂದೇ ನಂಬಿ, ಅದರ ಬೆನ್ನತ್ತಿರುವವರಿಗೆ ನೀನು ಹುಡುಕುತ್ತಿರುವುದು ನಿನ್ನೊಳಗೇ ಇದೆ. ಮನಸ್ಸು ನಿರ್ಮಲವಾಗಿದ್ದರೆ, ಪಾಸಿಟಿವ್ ಥಿಂಕಿಂಗ್ ಮತ್ತು ಎನರ್ಜಿಯನ್ನು ಒಳಗೊಂಡಿದ್ದರೆ ಎಂತಹದ್ದೇ ಕಷ್ಟದ ಕ್ಷಣಗಳನ್ನೂ ಹೇಗೆ ಸುಲಭವಾಗಿ ಎದುರಿಸಬಹುದು, ಆರೋಗ್ಯವನ್ನು ಯಾವ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಮಂದಾರವಲ್ಲಿಯವರು ಸರಳ ಶೈಲಿಯಲ್ಲಿ ಇಲ್ಲಿನ ಲೇಖನಗಳಲ್ಲಿ ವಿವರಿಸಿದ್ದಾರೆ ಎಂದು ಇಲ್ಲಿ ತಿಳಿಸಲಾಗಿದೆ.
ಉಪನ್ಯಾಸಕರಾಗಿರುವ ಮಂದಾರವಲ್ಲಿ ಎಂ. ಆರ್.ಅವರು ಜನಿಸಿದ್ದು 1961 ಮೇ 15 ರಂದು. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿರುವ ಇವ ಪ್ರಮುಖ ಕೃತಿಗಳೆಂದರೆ ಗೊಂದಲಗಳ ನಾಡಿನಲ್ಲಿ, ನವಸಾಕ್ಷರ ಸಾಹಿತ್ಯ ಪರಿಸರ ಎಂದರೇನು? ಮುಂತಾದವು. ...
READ MORE