ಲೇಖಕ ಪ್ರೊ. ವೆಂಕಟಗಿರಿ ದಳವಾಯಿ ಅವರ ’ ಇದು ಹೇಳಲು ಬಾರದು’ ಕೃತಿಯು ವೈಚಾರಿಕ ಲೇಖನಗಳ ಸಂಗ್ರಹವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಡಾ. ಬಿ.ಎಂ ಪುಟ್ಟಯ್ಯ ಅವರು, ವ್ಯಕ್ತಿಗಳ ವೈಯುಕ್ತಿಕ ಹಾಗೂ ಸೈದ್ದಾಂತಿಕ ವ್ಯಕ್ತಿತ್ವಗಳ ಮೂಲಕ ಅವರ ಕಾಲದ ರಾಜಕೀಯ - ಆರ್ಥಿಕ- ಸಾಂಸ್ಕೃತಿಕ ಜಗತ್ತನ್ನು ವಿಶ್ಲೇಷಿಸುವುದು; ಈ ವಿಶ್ಲೇಷಣೆಯ ಮೂಲಕ ಅವರ ಒಟ್ಟು ದರ್ಶನವನ್ನು ಅರ್ಥಮಾಡಿಕೊಳ್ಳವುದು, ಇವೆರಡೂ ವಿಚಾರಗಳು ಈ ಕೃತಿಯಲ್ಲಿ ಒಟ್ಟೊಟ್ಟಿಗೆ ಬಂದಿದೆ. ಸಮಾಜ ಮತ್ತು ಸಾಹಿತ್ಯದಿಂದ ನಾವು ಕಲಿಯುವಂತದ್ದು ಮತ್ತು ನಾವು ಸಮಾಜ ಹಾಗೂ ಸಾಹಿತ್ಯಕ್ಕೆ ಕಲಿಸುವಂತಹದ್ದು ಯಾವುದು ಎಂಬುದರ ಪ್ರಾಮಾಣಿಕ ಹುಡುಕಾಟ ದಳವಾಯಿಯವರ ಈ ಬರವಣಿಗೆಯಲ್ಲಿದೆ. ಇಂತಹದ್ದು ಸರಿಯಿಲ್ಲ, ಅದು ಬೇಡ ಎಂಬ ನಕಾರಾತ್ಮಕ ಧೋರಣೆಗೆ ಇಲ್ಲಿ ಜಾಗವಿಲ್ಲ. ಹಸಿವು, ಅಪಮಾನಗಳಿಲ್ಲದ ನ್ಯಾಯಯುತ ಮತ್ತು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಅರಿವಿನ ಶೋಧವನ್ನು ಈ ಬರವಣಿಗೆ ಮಾಡಿದೆ. ಆತುರವಿಲ್ಲದ, ಅಕ್ರೋಶವಿಲ್ಲದ ಅತ್ಯಂತ ಸಮಾಧಾನದ ತಿಳಿ ಮನಸ್ಸೊಂದು ಇಲ್ಲಿಯ ಆಲೋಚನೆಯನ್ನು ರೂಪಿಸಿದೆ. ಹದವಾದ ನುಡಿಗಟ್ಟು ಇಲ್ಲಿಯ ವಿಷಯ ಮಂಡನೆ ಮತ್ತು ನಿರೂಪಣೆಯನ್ನು ನಡೆಸಿದೆ. ಇದು ಈ ಬರವಣಿಗೆಯ ಮಹತ್ವವನ್ನು ಹೆಚ್ಚಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ವೆಂಕಟಗಿರಿ ದಳವಾಯಿ ಮೂಲತಃ ಬಳ್ಳಾರಿಯವರು. ಎಂ.ಎ, ಎಂ.ಫಿಲ್, ಹಾಗೂ ಪಿ.ಎಚ್.ಡಿ ಪದವೀಧರರು. ರಂಗಭೂಮಿ ಹಾಗೂ ಬರಹಗಳ ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಹಂಪಿಯ ಕನ್ನಡ ವಿ.ವಿ.ಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು. ಪಿ.ಎಚ್.ಡಿ ಹಾಗೂ ಎಂ.ಫಿ.ಎಲ್ ಮಾರ್ಗದರ್ಶಕರು. ಕೃತಿಗಳು: ಕಪ್ಪು ವ್ಯಾಕರಣ, ಇಂದು ಹೇಳಲೆಬಾರದು, ನಾನು ನೀನು ಆನು, ಅಪ್ರಮಾಣ,ಮೇಲೊಂದು ಗರುಡ. ಸಂಪಾದಿತ ಕೃತಿಗಳು: ಕಪ್ಪು ಕಾಲಿ ಕಡಗ, ಡಾಬಾಳಾ ಸಾಹೇಬ್ ಲೋಕಪುರ ಕಥನ ಸಂವಾದ, ಅನಿಕೇತನ ಕನ್ನಡ ಸಾಹಿತ್ಯ ಅಕಾಡೆಮಿ ಸಾಹಿತ್ಯ . ವಿಮರ್ಶಾ ದಾರಿಯಲ್ಲಿ, ಕಾವ್ಯವೆಂದರೆ ಹೊಸ ಮನುಷ್ಯನ ಹುಡುಕಾಟ-ಕವಿ ...
READ MORE