ಲೇಖಕಿ ಗೀತಾ ಜಿ. ಹೆಗಡೆ ಕಲ್ಪನೆ, ಅವರ ‘ಮನಸೆ ನೀನೇಕೆ ಹೀಗೆ’ ಕೃತಿಯು ಲೇಖನಗಳ ಸಂಕಲನವಾಗಿದೆ. ಕೃತಿಯ ಕುರಿತು ಉದಯಕುಮಾರ ಹಬ್ಬು ಅವರು, ‘ಗೀತಾ ಜಿ ಹೆಗಡೆ ಕಲ್ಮನೆ ಅವರ ಈ ಪುಸ್ತಕ ಲೋಕದ ಡೊಂಕನ್ನು ತಿದ್ದುವ, ಮನದ ಡೊಂಕಿನ ಮನದ ಸ್ವರೂಪದ ಸ್ವಭಾವ ಹಾಗೂ ವಿಕ್ಷಿಪ್ತತೆಯ ಕುರಿತು ಬರದಿರುವ ಚಿಂತನ ಬರಹಗಳಿವೆ. ಲೋಕದಲ್ಲಿ ಹಲವಾರು ಬಗೆಯ ಹಲವಾರು ಸ್ವಭಾವಗಳ ಮನುಷ್ಯರಿರುತ್ತಾರೆ. ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಎಚ್ಚರಿಕೆಯ ತಿಳಿವಳಿಕೆಯ ಅನುಭವಾಮೃತವುಳ್ಳ ಬರಹಗಳ ಗುಚ್ಛ ಇದು. ಮನುಷ್ಯನ ಅಂತರಂಗದ ಮತ್ತು ಬಹಿರಂಗದ ಆಶುದ್ಧಿಯ ಬಗ್ಗೆ ಮಾತನಾಡುತ್ತ," ಹಾಗಾದರೆ ಅಂತರಂಗದಲ್ಲೊಂದು, ಬಹಿರಂಗದೊಲ್ಲೊಂದು ಮಾತನಾಡುವರೆ? ಯಾಕೆ ಹೀಗೆ ಮಾತಾಡುತ್ತಾರೆ? ಯಾಕೆ ಹೀಗೆ ಮಾತನಾಡಬೇಕು? ಯಾವ ಸಂದರ್ಭದಲ್ಲಿ ಹೀಗೆ ಮಾತಾಡಬೇಕು? ಈ ರೀತಿ ಮಾತನಾಡುವುದು ತಪ್ಪಲ್ಲವೆ? ಇಂಥವರೂ ಇದ್ದಾರಾ? ಹೇಗೆ ಕಂಡು ಹಿಡಿಯುವುದು?" ಈ ಮುಂತಾದ ಪ್ರಶ್ನೆಗಳನ್ನು ಎತ್ತಿ ಅವುಗಳಿಗೆ ಸಮರ್ಪಕ ನಿವಾರಣೆಯನ್ನು ಸೂಚಿಸುತ್ತಾರೆ’ ಎಂದು ಇಲ್ಲಿಯ ಬರಹವನ್ನು ಪ್ರಶಂಸಿಸಿದ್ದಾರೆ.
ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) ...
READ MORE