ಪ್ರಕಾಶಕ ಹಾಗೂ ಲೇಖಕ ಗೌರಿ ಸುಂದರ್ ಅವರು ಸಂಪಾದಿಸಿದ ಕೃತಿ-ಯದುವಂಶದ ಯದುವೀರರು. ಮೈಸೂರು ಮಹಾರಾಜರ ಮೂಲ ಒಡೆತನವು ಯದುವಂಶಜರದ್ದೇ ಆಗಿದೆ. ಶ್ರೀಕಂಠದತ್ತ ನರಸಿಂಹ ಒಡೆಯರ್ ಅವರ ನಿಧನಾನಂತರ (2005) ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ನೆರವೇರಿಸಲಾಯಿತು. ಸುಮಾರು 550 ವರ್ಷಗಳ ಇತಿಹಾಸ ಈ ಯದುವಂಶದ್ದು. ಈ ವಂಶದ ಇತಿಹಾಸ, ಆಳ್ವಿಕೆ ನಡೆಸಿದ ರಾಜರು, ಅವರ ಕೆಲಸ ಕಾರ್ಯಗಳು ಹೀಗೆ ಐತಿಹಾಸಿಕ ಮಾಹಿತಿ ಒಳಗೊಂಡ ಲೇಖನಗಳನ್ನು ಸಂಪಾದಿಸಲಾಗಿದೆ.
ಸಿನಿಮಾ ನಿರ್ಮಾಪಕ- ನಿರ್ದೇಶಕ, ಪುಸ್ತಕ ಪ್ರಕಾಶಕ, ಕನ್ನಡ ಚಳವಳಿ, ರಂಗಭೂಮಿ, ಛಾಯಾಗ್ರಹಣ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರು ಗೌರಿ ಸುಂದರ್. ಇವರು ಮೂಲತಃ ಮೈಸೂರಿನವರು. ಅರಮನೆಯಲ್ಲಿ ನಡೆಯುವ ಗೌರಿ ಪೂಜೆಗೆ ಇವರ ಮನೆತನದ್ದೇ ಪೌರೋಹಿತ್ಯವಿತ್ತು. ಆದ್ದರಿಂದ, ಇವರ ಮನೆತನಕ್ಕೆ ‘ಗೌರಿ’ ಎಂಬ ಹೆಸರು ಸೇರಿಕೊಂಡಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಕೆಲ ಕಾಲ ಗೈಡ್ ಆಗಿ ಕೆಲಸ ನಿರ್ವಹಿಸಿದ್ದರು. ಹೊಸಅಲೆಯ ಸಂಸ್ಕಾರ ಚಲನಚಿತ್ರ ನೋಡಿದ ಮೇಲೆ ಅವರು ಸಿನಿಮಾದತ್ತ ಮುಖ ಮಾಡಿದರು. ನಂತರ, ಅವರು ಹೊಸ ಅಲೆಯ ‘ಸಂದರ್ಭ’ ಸಿನಿಮಾ ಮಾಡಿದರು. ರಂಗಭೂಮಿ ಹಾಗೂ ದೂರದರ್ಶನದಲ್ಲಿ ಆಸಕ್ತಿ ಮೂಡಿ ...
READ MORE