ಲೇಖಕ ಕೆ. ಕೇಶವಶರ್ಮ ಅವರು ಬರೆದಿರುವ ವಸಾಹತುಶಾಹಿ ಅನುಭವದ ಕುರಿತ ಲೇಖನಗಳ ಸಂಗ್ರಹ ’ಪಡು ಮೂಡು’.
ಸಾಹಿತ್ಯ ಕೃಷಿಯಲ್ಲಿ ಯಾವುದೇ ಸುದ್ದು-ಗದ್ದಲವಿಲ್ಲದೇ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಬಂದಿರುವ ಕೆ.ಕೇಶವಶರ್ಮ ಅವರ ಮಹತ್ವದ ಕೃತಿಯಿದು. ವಸಾಹತುಕಾಲದ ವಿವಿಧ ಸಂಕಥನಗಳನ್ನು ಕುರಿತು ಬರೆದಿರುವ ಇಲ್ಲಿಯ ಲೇಖನಗಳಿಗೆ ಚಾರಿತ್ರಿಕ ಮಹತ್ವವಿದೆ. ಪೌರಾತ್ಮವಾದ ಸಬ್ ಆಲ್ಟ್ರಸ್ ಸೈಡ್ ಗೆ ಕೇಳಲೇಬೇಕಾದ ಪ್ರಶ್ನೆಗಳು ವಸಾಹತುಕಾಲ ಶಿಕ್ಷಣ ಪದ್ಧತಿ ಆಸ್ಪತ್ರೆಗಳು ಬುದ್ಧಿಜೀವಿಗಳು-ಹೀಗೆ ಇಲ್ಲಿ ವಾಗ್ವಾದಗಳಿವೆ. ಕೇಶವಶರ್ಮ ಅವರ ಅಪೂರ್ವ ಒಳನೋಟ ಅವರ ಬೌದ್ಧಿಕ ಶ್ರಮ ಸಾಹಿತ್ಯ ವಿಮರ್ಶೆಯಲ್ಲಿನ ವಿವೇಶಗಳು ಈ ಕೃತಿಯಲ್ಲಿ ಹರಳುಗಟ್ಟಿವೆ.
ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...
READ MORE