ಸಾಮಾಜಿಕ ಚಿಂತನೆಗಳ ಭಾವಯಾನದ ಲೇಖನಗಳ ಸಂಗ್ರಹವಿದು. ಸಾವಿಗೆ ಯಾವ ಜೀವಿಯೂ ಅತೀತವಲ್ಲ ಎಂಬ ಸತ್ಯವನ್ನು ಕೊರೋನಾ ನಮಗೆಲ್ಲ ಮನದಟ್ಟು ಮಾಡಿಸಿಹೋಯಿತು. ಅಂತಹ ದುರಿತ ಕಾಲದಲ್ಲಿ ಅಮಾನವೀಯ ಮುಖಗಳ ಅನಾವರಣವಾಗುವುದಕ್ಕೆ ಸಮಾನಾಂತರದಲ್ಲಿ ಜೀವಪರ ತುಡಿತಗಳು ಕೂಡ ವಿಜೃಂಭಿಸಿದವು. ನಮ್ಮ ಅಳತೆಗೆ ಮೀರಿದ ಅಗೋಚರ ಸಂಗತಿಗಳು ಜಗತ್ತನ್ನು ಅಲ್ಲಾಡಿಸಿದ ಪರಿಯನ್ನು ಅಂದಿನ ಘಟನೆಗಳ ನೆನಪಿನಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟ ಪರಿ ಓದುಗನಲ್ಲಿ ಧನ್ಯತಾ ಭಾವ ಮೂಡಿಸುತ್ತದೆ. ಖ್ಯಾತ ಕಥೆಗಾರ ಡಾ. ಬಾಳಾಸಾಹೇಬ ಲೋಕಾಪುರ ಅವರ ಬೆನ್ನುಡಿ, ಕ್ರಿಯಾಶೀಲ ಬರಹಗಾರ ಶ್ರೀಧರ ಬನವಾಸಿ ಅವರ ಮುನ್ನಡಿ ಕೃತಿಗೆ ಕಳೆ ತಂದುಕೊಟ್ಟಿವೆ.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE