ಡಾ.ಲಕ್ಷ್ಮಿಕಾಂತ್ ಪಂಚಾಳ ಅವರು ರಚಿಸಿದ ಕೃತಿ-ಅನುಶೀಲನ. ಕನ್ನಡ ಸಾಹಿತ್ಯದ ಬಹುಮುಖ್ಯ ನೆಲೆಗಳು, ಕನ್ನಡ ಕಾವ್ಯಪರಂಪರೆಯ ವಸ್ತು ಮತ್ತು ಆಶಯ, ಅಜಿತನಾಥ ಪುರಾಣ: ಒಂದು ವಿಶ್ಲೇಷಣೆ, ಕನಕದಾಸರ ಕೀರ್ತನೆಗಳಲ್ಲಿ ವೈಚಾರಿಕತೆ, ಬೂದಿಹಾಳದ ಲಕ್ಷ್ಮೀಶ ಕವಿ ಕೃತಿ ಕಲ್ಯಾಣ,ಸೇರಿದಂತೆ 12 ಹೆಚ್ಚು ಲೇಖನಗಳು ಒಳಗೊಂಡಿವೆ. ಪ್ರತಿ ಬರಹದ ವಸ್ತು ವೈವಿಧ್ಯಮಯವಾಗಿದೆ. ಕನ್ನಡ ಸಾಹಿತ್ಯದ ಬಹುಮುಖಿ ನೆಲೆಯಲ್ಲಿ ಲೇಖಕರು ತಮ್ಮ ವಿಚಾರಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ.
ಲೇಖಕ ಲಕ್ಷ್ಮಿಕಾಂತ ಪಂಚಾಳ ಅವರು ಮೂಲತಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಎಳವಂತಿಗಿ ಗ್ರಾಮದವರು. ಎಂ. ಎ, ಪಿಎಚ್.ಡಿ ಪದವೀಧರರು. ಕೃತಿಗಳು: ಸಾಮಾನ್ಯ ಕನ್ನಡ ಕೈಪಿಡಿ, ಕನ್ನಡ ಕೈದೀವಿಗೆ, ಕಡ್ಡಾಯ ಕನ್ನಡ, ಸಾಹಿತ್ಯ ದೀಪ್ತಿ, ಸರಳ ಛಂದಸ್ಸು,ಅನುಶೀಲನ. ...
READ MORE