ಒಡಲಾಗ್ನಿ

Author : ಎಂ.ಎಸ್‌. ಮಣಿ

Pages 134

₹ 100.00




Year of Publication: 2016
Published by: ಎಸ್‌. ರಾಯುಡು ಪ್ರಕಾಶನ
Address: ನಂ. 14 ರಾಯುಡು ನಿಲಯ,3 ಪ್ಲೋರ್‌, 4ತ್‌ ಕ್ರಾಸ್‌, ಜೆ.ಜೆ. ಆರ್‌ ನಗರ , ಬೆಂಗಳೂರು560001
Phone: 26770093

Synopsys

ಒಡಲಾಗ್ನಿ ಡಾ.ಎಂ ಎಸ್‌ ಮಣಿ ಅವರ ಪತ್ರಿಕಾ ಬರಹಗಳ ಕುರಿತಾದ ಕೃತಿಯಾಗಿದೆ. ಒಡಲಾಗ್ನಿ ಕೃತಿ ಸುಮಾರು 33 ವೈವಿಧ್ಯಮಯ ಹಾಗೂ ವಿಚಾರ ಪ್ರಚೋದಕ ಪತ್ರಿಕಾ ಬರಹಗಳನ್ನು ಒಳಗೊಂಡಿದೆ. ಆಂಧ್ರದಲ್ಲಿ ಬೆಲೆಬಾಳುವ ಮರಗಳನ್ನು ಕಡಿದ ಮರಗಳ್ಳರೆಂಬ ಹಣೆಪಟ್ಟಿ ನೀಡಿ ಕಾಡಿನಂಚಿನ ಗಿಡಬಳ್ಳಿಗಳನ್ನು ಹೊಟ್ಟೆಪಾಡಿಗಾಗಿ ನಾಡಿಗೆ ಬಂದು ಮಾರಾಟ ಮಾಡುವ ಬಡವರನ್ನು ಪೊಲೀಸರು ಅಮಾನುಷವಾಗಿ ಕೊಂದ ಬಗೆ ಮತ್ತು ಮಾಧ್ಯಮಗಳು ಇದನ್ನು ವೈಭವೀಕರಿಸಿದ ವೃತ್ತಿಧರ್ಮ ವಿರೋಧಿ ವರದಿಗಾರಿಕೆಯನ್ನು ಲೇಖಕರು ಖಂಡಿಸಿದ್ದಾರೆ. ಗೋವಾದ ಬೈನಾ ಕಡಲ ದಂಡೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಕೆಲವಾರು ದಶಕಗಳಿಂದ ಜೀವಿಸುತ್ತಿದ್ದ ಕರ್ನಾಟಕದ ವಲಸೆಗಾರರನ್ನು ಗೋವಾ ಸರ್ಕಾರ ಮೂಲಸೌಕರ್ಯಗಳ ಅಭಿವೃದ್ಧಿಯ ಹೆಸರಿನಲ್ಲಿ ಬೀದಿಪಾಲು ಮಾಡಿರುವ ಮಾನವ ಹಕ್ಕು ಉಲ್ಲಂಘನೆಯನ್ನು ಇವರು ಬೆಳಕಿಗೆ ತಂದಿದ್ದಾರೆ. ಮುಗ್ಧ ಪತ್ನಿಯ ಮೇಲೆ ನಡೆಸುವ ಅಮಾನವೀಯ ಅತ್ಯಾಚಾರ ಸಂಗತಿಯನ್ನು ಇವರ ಲೇಖನ ಪರಿಣಾಮಕಾರಿಯಾಗಿ ಪರಿಚಯಿಸುತ್ತದೆ. 'ನೇಪಾಳ ಚಿತೆಯಲ್ಲಿ ಚಳಿ ಕಾಯಿಸಿಕೊಂಡವರು' ನೇಪಾಳದಲ್ಲಿ ಜರುಗಿದ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ದೃಶ್ಯ ಮಾಧ್ಯಮ ವಹಿಸಿದ ಬೇಜವಾಬ್ದಾರಿಯುತ ಪಾತ್ರದ ವಿಶ್ಲೇಷಣೆಯಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜೀವಜಲ ವಿಷವಾದ ಬಗೆಯನ್ನು ಇವರು ವಿಶ್ಲೇಷಿಸಿರುವ ಬಗೆ ಅನನ್ಯವಾಗಿದೆ. ಮೂಲಭೂತವಾದಿಗಳು ಕೇವಲ ಇಸ್ಲಾಂ ಧರ್ಮವೊಂದಕ್ಕೆ ಸೀಮಿತವಾಗಿಲ್ಲದೆ ಎಲ್ಲ ಧರ್ಮಗಳಲ್ಲಿಯೂ ಇದ್ದು ಭಾತೃತ್ವಕ್ಕೆ ನಷ್ಟವುಂಟುಮಾಡುತ್ತಿರುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮನುಕುಲದ ಮೇಲೆ ಜರುಗುತ್ತಿರುವ ಅತ್ಯಾಚಾರದ ಬಲಿಪರು ಅರುಣಾ ಶಾನಭಾಗದ ಕಥೆ ಮನಕಲಕುವಂತಿದೆ. ಜಗತ್ತನ್ನು ಕಾಡುವ ದುಃಖಕ್ಕೆ ಬುದ್ಧ ಮಾರ್ಗವೇ ಪರಿಹಾರವೆಂಬ ಇವರ ವಿಚಾರಧಾರೆ ಮಾನವೀಯ ನೆಲೆಗಟ್ಟನ್ನು ಹೊಂದಿದೆ. ಭಾರತದ ತುರ್ತುಪರಿಸ್ಥಿತಿ ಕಾಲದಲ್ಲಿ ಪ್ರಜಾಸತ್ತೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಉಂಟಾದ ಆಪತ್ತನ್ನು ದೇಶಪ್ರೇಮಿಗಳು ಆತ್ಮವಿಶ್ವಾಸದಿಂದ ಎದುರಿಸಿದ ಬಗೆ ಕುರಿತ ಲೇಖನ ಭರವಸೆ ಮೂಡಿಸುತ್ತದೆ.

About the Author

ಎಂ.ಎಸ್‌. ಮಣಿ

ಡಾ.ಎಂ.ಎಸ್‌. ಮಣಿ  ಅವರು  ಪತ್ರಿಕಾ ರಂಗದಲ್ಲಿ  ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ.  ಮಾಧ್ಯಮ  ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್‌ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...

READ MORE

Related Books