‘ಓದುವರೆಲ್ಲ ಓದುಗರಲ್ಲ’ ಕೃತಿಯು ಕೆ. ಸತ್ಯನಾರಾಯಣ ಅವರ ಬರಹಗಳ ಸಂಕಲನವಾಗಿದೆ. ಓದುವಿಕೆ ಕುರಿತು ಎಲ್ಲ ಓದುಗರ ಮನಸ್ಸಿನಲ್ಲೂ ಹಾದು ಹೋಗುವ ಬೆರಗು, ಸಂತೋಷ, ಪ್ರಶ್ನೆ, ಪ್ರಮೇಯ, ಅನುಮಾನಗಳನ್ನು ಈ ಪುಸ್ತಕ ' ಗಂಭೀರವಾಗಿಯೂ. ತುಂಟತನದಿಂದಲೂ ಗಮನಿಸಿದೆ. ಓದುವ, ಬರೆಯುವ ಪ್ರಾರಂಭದ ದಿನಗಳಲ್ಲಿ ಇದ್ದ ಬೆರಗು, ಮುಗ್ಧತೆ, ನಿಸ್ಪೃಹತೆಗಳನ್ನು ಮತ್ತೆ ಪಡೆದುಕೊಳ್ಳಲು ಈ ಬರವಣಿಗೆ ನೆರವಾಗುದಂತು ಖಂಡಿತ. ಓದನ್ನು ಪ್ರಾರಂಭಿಸುವಾಗ ಮತ್ತು ಮುಗಿಸುವಾಗ, ನಮ್ಮಲ್ಲಿ ಇರಬೇಕಾದ ದಿಗಂಬರ ನೆಲೆಗಳ ಕಡೆಗೆ ಪ್ರಯಾಣ ಹೊರಡಲು ಈ ಪುಸ್ತಕ ನೆರವಾಗುತ್ತದೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE