ಜಾನಪದ ಅಧ್ಯಯನ ಲೇಖನಗಳ ಸಂಕಲನ ‘ದಾಂಗುಡಿ’. ಗ್ರಾಮೀಣ ಸಂವೇದನೆ ಡಾ. ಎಂ.ಎಂ.ಪಡಶೆಟ್ಟಿ ಅವರ ಮೂಲದ್ರವ್ಯ. ಗ್ರಾಮ ಪರಿಸರದಲ್ಲಿ ಜನಿಸಿ ಅದೇ ವಾತಾವರಣದಲ್ಲಿ ಬೆಳೆಯುತ್ತ, ಬದುಕುತ್ತಾ ಬಂದಿರುವ ಅವರಿಗೆ ಜಾನಪದ ಬದುಕಿನ ಎಲ್ಲಾ ಮಗ್ಗಲುಗಳು ಅಂಗೈರೇಖೆಗಳಷ್ಟು ಸ್ಪಷ್ಟವಾಗಿದೆ. ಇವರಿಗೆ ಗ್ರಾಮೀಣರ ರೀತಿ ನೀತಿ, ನಂಬಿಕೆ-ಸಂಪ್ರದಾಯಗಳು ಇಷ್ಟೊಂದು ಗಾಢವಾಗಿರುವುದರಿಂದಲೇ ಎಲ್ಲವನ್ನೂ ಅತ್ಯಂತ ಸಹಜರೀತಿಯಲ್ಲಿ ವಿವರಿಸುತ್ತಾರೆ.
ಜಾನಪದ ಬದುಕಿನ ದಟ್ಟ ಅನುಭವ, ಲಭ್ಯವಿಷಯಗಳನ್ನು ಸಂಶೋಧನೆ- ವಿಶ್ಲೇಷಣೆಗಳ ಮೂಲಕ ಒರೆದು ನೋಡಬಲ್ಲ ಚಿಂತನಕ್ರಮ, ಕ್ಷೇತ್ರಕಾರ್ಯದ ಪರಿಶ್ರಮ- ಈ ಮೂರು ನೆಲೆಗಳಲ್ಲಿ ಡಾ. ಪಡಶೆಟ್ಟಿ ಅವರ ಅಧ್ಯಯನದ ವ್ಯಾಪ್ತಿಯನ್ನು ನಾವು ಗುರುತಿಸಬಹುದು.
ಎಂ. ಎಂ. ಪಡಶೆಟ್ಟಿ ಅವರು ಮಲ್ಲಪ್ಪ ಪಡಶೆಟ್ಟಿ ಮತ್ತು ಅಯ್ಯಮ್ಮ ಮಲ್ಲಪ್ಪ ಪಡಶೆಟ್ಟಿ ಅವರ ಮಗನಾಗಿ 01-06-1949 ರಂದು ಅಸ್ಕಿ ಗ್ರಾಮದ ಸಿಂದಗಿ ತಾಲ್ಲೂಕಿನ ವಿಜಯಪುರ ಜಿಲ್ಲೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಅಸ್ಕಿಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕಲಕೇರಿಯಲ್ಲಿ, ಕಾಲೇಜು ಶಿಕ್ಷಣವನ್ನು ವಿಜಯಪುರದಲ್ಲಿ ಪಡೆದರು. 1974 ರಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಜಿ.ಪಿ ಪೋರವಾಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ ಅಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. 1991 ರಲ್ಲಿ ತಿಂಥಿಣಿ ಮೋನಪ್ಪಯ್ಯ – ಒಂದು ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ...
READ MORE