ಕನ್ನಡ ಬರಿಯ ನಾಡು ನುಡಿ ಮಾತ್ರವಲ್ಲ. ಬದಲಿಗೆ ಪರಿಸರ ನುಡಿ, ಮೊದಲ ನುಡಿಯೂ ಹೌದು. ಭಾಷಾಭಿವ್ಯಕ್ತಿ, ಉನ್ನತ ವಿಚಾರಗಳ ಶಿಕ್ಷಣ, ಗ್ರಂಥ ಭಂಡಾರದ ರಕ್ಷಣೆ, ವೈವಿಧ್ಯತೆಯುಳ್ಳ ಒಂದು ಭಾಷೆಯ ಏಕರೂಪತೆ ಮತ್ತು ಸಂಸ್ಕೃತಿಯ ರಕ್ಷಣೆ ದಿನನಿತ್ಯದಲ್ಲಿ ಉಪಯೋಗಿಸಿದಾಗ ಮಾತ್ರ ಸಾಧ್ಯ. ಈ ದಿಶೆಯಲ್ಲಿ ಕನ್ನಡ ಭಾಷೆಯ ಆಗು-ಹೋಗುಗಳು, ಚಿಂತನೆಗಳು, ಗತಿ-ಸ್ಥಿತಿ, ಸಮಸ್ಯೆಗಳ ಬಗ್ಗೆ ಕಾಲಕಾಲಕ್ಕೆ ಬರೆದ ಲೇಖನಗಳ ಸಂಗ್ರಹ ಈ ಕೃತಿ; ಕನ್ನಡ ಪ್ರಜೆಯ ಡಿಂಡಿಮ ಬಾರಿಸುವತ್ತ ಮಾತನಾಡುತ್ತದೆ.
ಸಾಹಿತಿ ಯು.ಎನ್. ಸಂಗನಾಳಮಠ 1949 ಅಕ್ಟೋಬರ್ 07 ಮೂಲತಃ ಧಾರವಾಡದವರು. ಸಿರಿಗನ್ನಡ ವೇದಿಕೆ ಅಧ್ಯಕ್ಷರಾಗಿದ್ದು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನನ್ಯ, ಉದಯ ಕರ್ನಾಟಕ, ಧರ್ಮ ಸುಧಾ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಬರೆದ ಅನುಭವ. ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿದ್ದು ’ಕನ್ನಡ ಡಿಂಡಿಮ’ ಅವರ ಇತ್ತಿಚಿನ ಕೃತಿ. ಉಮೇಶ್ ಎಸ್. ಎನ್. ಅವರ ಕಾವ್ಯನಾಮ. ...
READ MORE