‘ನೆಲದ ಕಣ್ಣು’ ಕಾ. ವೆಂ. ಶ್ರೀನಿವಾಸ ಮೂರ್ತಿ ಅವರ ಲೇಖನಗಳಾಗಿವೆ. ಇದುವರೆಗಿನ ಸಾಹಿತ್ಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತ ಲೇಖಕರು ತಮ್ಮದೇ ನಿರ್ಭಿತ ವಿಚಾರಗಳನ್ನು ಹೇಳುತ್ತಲೇ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳನ್ನೂ ಜೊತೆಯಲ್ಲೇ ಇಟ್ಟು ತೂಗಿ ನೋಡಿದ್ದಾರೆ.
ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...
READ MOREಹೊಸತು- 2004- ಜನವರಿ
ಸಾಹಿತ್ಯದ ಆಳವಾದ ಅಧ್ಯಯನದ ಫಲವಾಗಿ ಇಲ್ಲಿಯ ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಬರಹಗಳು ರೂಪುಗೊಂಡಿವೆ. ಇತಿಹಾಸದ, ಸಂಸ್ಕೃತಿಯ ಗ್ರಹಿಕೆಯಲ್ಲಿ ಪ್ರಗತಿಪರ ಧೋರಣೆ ವ್ಯಕ್ತವಾಗಿದೆ. ಇದುವರೆಗಿನ ಸಾಹಿತ್ಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತ ಲೇಖಕರು ತಮ್ಮದೇ ನಿರ್ಭಿತ ವಿಚಾರಗಳನ್ನು ಹೇಳುತ್ತಲೇ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳನ್ನೂ ಜೊತೆಯಲ್ಲೇ ಇಟ್ಟು ತೂಗಿ ನೋಡಿದ್ದಾರೆ. ಲೇಖನಗಳ ವ್ಯಾಪ್ತಿಯೂ ತುಂಬ ವಿಶಾಲ ವಾಗಿದ್ದು ಚಿಕ್ಕ ಚೊಕ್ಕ ಬರಹಗಳ ಮೂಲಕ ಪ್ರಸ್ತುತ ಪಡಿಸಲಾಗಿದೆ.