“ಕಣ್ ತೆರೆಸುವ ಸ್ಫೂರ್ತಿದಾಯಕ ಕಥೆಗಳು” ಕೃತಿಯು ರಾಜಮ್ಮ ಡಿ.ಕೆ ಅವರ ಕಥಾಸಂಕಲನವಾಗಿದೆ. ಇಲ್ಲಿ ನಿಜವಾದ ಸಂತಸ, ನೆಮ್ಮದಿ, ಜೀವನ ಪ್ರೀತಿ, ಸಕಾರಾತ್ಮಕ ಆಲೋಚನೆ, ಒಳ್ಳೆಯತನ ಇವೆಲ್ಲ ಮರೆಯಾಗಿ ಖಾಲಿ ಖಾಲಿ ಎನಿಸುವ ಮನಸ್ಸುಗಳಿಗೆ ಖಾಲಿ ಜಾಗವನ್ನು ಭರ್ತಿ ಮಾಡುವ ಪ್ರಯತ್ನವೇ ಕಣ್ ತೆರೆಸುವ ಅಂದರೆ ಹೊಸ ದಿಕ್ಕಿನೆಡೆಗೆ, ಹೊಸ ಸಾಧ್ಯತೆಗಳ ಕಡೆಗೆ ಯೋಚಿಸಲು, ಪ್ರಯತ್ನ ಬಿಡದೆ ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಸಾಧಿಸಲು, ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು, ಬದುಕಿನ ಉದ್ದೇಶವನ್ನು ನೆನಪಿಸಿಕೊಳ್ಳಲು, ಅರ್ಥಪೂರ್ಣವಾಗಿ ಬದುಕಲು ಎಚ್ಚರಿಸುವ ಸ್ಫೂರ್ತಿದಾಯಕ ಕಥೆಗಳಿವೆ. ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಕ್ಕಿರುವುದರಿಂದ, ವಿಭಿನ್ನ ವಸ್ತು, ವಿಷಯಗಳನ್ನು ಆರಿಸಿಕೊಂಡು ರಚಿಸಲಾಗಿರುವ 50 ಸ್ಫೂರ್ತಿ ಕಥೆಗಳನ್ನು ಓದುವುದರ ಮುಖೇನ ಕಳೆದುಕೊಂಡದ್ದನ್ನು ಮರಳಿ ಪಡೆಯಲಿ, ಹೊರಗಣ್ಣಿನ ಜೊತೆಗೆ ಒಳಗಣ್ಣನ್ನೂ ತೆರೆಯುವಂತಾಗಲಿ ಎಂಬುದೇ ಈ ಕೃತಿಯ ಆಶಯ.
ರಾಜಮ್ಮ ಡಿ.ಕೆ ಅವರು ಶಿಕ್ಷಕಿಯಾಗಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ರಂಗಭೂಮಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿರುತ್ತಾರೆ. ಕೃತಿಗಳು ; ಅರ್ಥಸಹಿತ ಅಮೂಲ್ಯ ಗಾದೆಗಳು, ಯಶಸ್ವಿ ಜೀವನಕ್ಕೆ ಸ್ಫೂರ್ತಿದಾಯಕ ಕತೆಗಳು, ಒಂದು ಕಥೆ ಹೇಳ್ಲಾ, 50 ಬದುಕು ಬದಲಿಸುವ ಕಥೆಗಳು ಪ್ರಶಸ್ತಿ ; 2021ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ‘ರಂಗ ಭೂಮಿ’ ಕ್ಷೇತ್ರ) ...
READ MORE