’ಕ್ರಿಕೆಟಾಯಣ’ ಎಚ್. ಪ್ರೇಮಾನಂದ ಕಾಮತ್ ಅವರ ಕ್ರೀಡಾ ಬರಹಗಳ ಸಂಗ್ರಹವಾಗಿದೆ. ಕ್ರೀಡಾಪುಟ ನಿರ್ಹಣೆಯ ಸವಾಲು, ಕ್ರೀಡಾ ಸಂಚಿಕೆ ನಿರೂಪಿಸಲು ಇರುವ ಸವಾಲು, ಎರಡು ಪುಟಗಳನ್ನು ಕ್ರೀಡೆಗೆ ಮೀಸಲಿಟ್ಟಾಗ ಮಾಡಿದ ಕಸರತ್ತು ಹೀಗೆ ವೃತ್ತಿ ಜೀವನದ ಅನೇಕ ಮಜಲುಗಳನ್ನು ಸುಲಲಿತವಾಗಿ ಕಾಮತರು ತಾವು ಬರೆದ ಕ್ರಿಕೆಟಾಯಣ ಪುಸ್ತಕದಲ್ಲಿ ವಿವರಿಸಿದ್ದಾರೆ . ಅವರು ತರಂಗದಲ್ಲಿ ಬರೆಯುತ್ತಿದ್ದ ಅಂಕಣದ ಹೆಸರೇ ಈ ಪುಸ್ತಕದ ಹೆಸರು ಕ್ರೀಡಾಂಗಣ ಇದಕ್ಕೆ ಸ್ಫೂರ್ತಿ ಯಾಗಿದೆ. ಮೂರು ನಾಕು ದಶಕಗಳಲ್ಲಿ ಬರೆದ ಅನೇಕ ಕ್ರೀಡಾ ಬರಹಗಳನ್ನು ಒಳಗೊಂಡಿದೆ. ಪುಸ್ತಕ ಕುತೂಹಲ ಮೂಡಿಸಲು ಅನೇಕ ಕಾರಣಗಳಿವೆ. ಒಂದು ಪುಟ್ಟ ಪುಟ್ಟ ಬರಹಗಳು. ಎರಡು- ಎಂದಿಗೂ ಹಳತಾಗದ ಬರಹಗಳು. ಮೂರು- ಉಪಯುಕ್ತ ಮಾಹಿತಿಗಳು. ನಾಕು- ಕ್ರೀಡಾ ಬರಹಗಾರರು ,ಕ್ರಿಕೆಟಿಗರ ಸವಾಲುಗಳ ಸ್ವರೂಪದ ವಿವರಣೆ. ಐದು- ಕುತೂಹಲದ ಸಣ್ಣ ಸಣ್ಣ ಮಾಹಿತಿಗಳ ಉದಾಹರಣೆಯನ್ನು ಈ ಕೃತಿಯಲ್ಲಿ ಕಾಣಲು ಸಾಧ್ಯ ಎಂದು ಲಕ್ಷ್ಮೀ ಮಚ್ಚಿನ ಅವರು ಕೃತಿಯ ವಿಮರ್ಶೆಯಲ್ಲಿ ತಿಳಿಸಿದ್ದಾರೆ.
ಎಚ್. ಪ್ರೇಮಾನಂದ ಕಾಮತ್ ಅವರು ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿದ್ದಾರೆ. ...
READ MORE