ಕಾಲದ ಮಾಯೆ

Author : ಶಿವಗಂಗಾ ರುಮ್ಮಾ

Pages 104

₹ 100.00




Year of Publication: 2009
Published by: ಬಸವ ಮಾರ್ಕ್ಸ್ ಪ್ರಕಾಶನ
Address: ಪ್ಲಾಟ್ ನಂ- 329, ಜಿ.ಡಿ.ಎ. ಲೇಔಟ್, ಅಂಬಾಭವಾನಿ ಗುಡಿ ಹತ್ತಿರ, ಕುಸನೂರು ರಸ್ತೆ, ಗುಲಬರ್ಗಾ- 585 105

Synopsys

‘ಕಾಲದ ಮಾಯೆ’ ಚಿಂತಕಿ, ಲೇಖಕಿ ಶಿವಗಂಗಾ ರುಮ್ಮಾ ಅವರ ಕೃತಿ. ಹನ್ನೆರಡನೇ ಶತಮಾನದ ಸುಲಿಗೆ ವ್ಯವಸ್ಥೆಯನ್ನು 20 ಮತ್ತು 21ನೇ ಶತಮಾನಗಳ ಸುಲಿಗೆ ವ್ಯವಸ್ಥೆಯ ಜೊತೆ ಹೋಲಿಸುತ್ತಾ ವಚನಗಳ ಮಹತ್ವ ಸಾರುವ ಮತ್ತು ಅವುಗಳನ್ನು ಪ್ರಸ್ತುತ ವ್ಯವಸ್ಥೆಯ ಕ್ರೌರ್ಯವನ್ನು ಅರಿತುಕೊಳ್ಳುವ ಹಾಗೆ ವಿಶ್ಲೇಷಿಸುವ ರೀತಿ ಅನುಕರಣೀಯವಾಗಿದೆ. 

ಮನುಷ್ಯರ ಬಗ್ಗೆ, ಜೀವ ವೈವಿಧ್ಯದ ಬಗ್ಗೆ ಮತ್ತು ಶೋಷಣೆರಹಿತ ಬದುಕಿನ ಬಗ್ಗೆ ಅವರಿಗಿರುವ ಕಾಳಜಿ ಪ್ರತಿಯೊಂದು ಲೇಖನದಲ್ಲಿ ವ್ಯಕ್ತವಾಗುತ್ತದೆ. ರುಮ್ಮಾ ಅವರು ವಸ್ತು ಮತ್ತು ಚೈತನ್ಯದ ಬಗ್ಗೆಯೂ ಬರೆದಿದ್ದಾರೆ. ವಸ್ತುವಿಲ್ಲದೆ ಚೈತನ್ಯವಿಲ್ಲ. ಚೈತನ್ಯವಿಲ್ಲದೆ ವಸ್ತುವಿಲ್ಲ ಎಂಬ ಅವರ ನಿಲುವು ವೈಜ್ಞಾನಿಕವಾಗಿದೆ. ಬರಿ ವಸ್ತುವಿನ ಬಗ್ಗೆ ಮಾತನಾಡುವವರು ಮತ್ತು ಬರಿ ಚೈತನ್ಯದ ಬಗ್ಗೆ ಮಾತನಾಡುವವರು ಪರಿಪೂರ್ಣತೆ ಸಾಧಿಸಲಾರರು ಈ ಇಜ್ಜೋಡಿನಿಂದಾಗಿ ಮಾನವ ಕುಲ ನ್ಯಾಯದಿಂದ ವಂಚಿತವಾಗಿದೆ.  

ವಸ್ತುವೆಂಬುದು ಚೈತನ್ಯದ ಕಾಣುವ ರೂಪ ಎಂಬುದನ್ನೂ ಬಸವಣ್ಣನವರು ಅರಿತುಕೊಂಡಿದ್ದರು. ಆದ್ದರಿಂದಲೇ ಅವರಿಗೆ ವಿಶ್ವವೆಲ್ಲಾ ಒಂದಾಗಿ ಕಂಡಿತು. ಹೀಗೆ ಒಂದಾಗಿ ಕಂಡಾಗ ಶೋಷಣೆ, ಕ್ರೌರ್ಯ ಮತ್ತು ಮೇಲು ಕೀಳುಗಳ ವಿರುದ್ಧ ಅವರು ಹೋರಾಡಿದರು ಮತ್ತು ಲಕ್ಷಾಂತರ ಕಾಯಕ ಜೀವಿಗಳು ಅನ್ಯಾಯದ ವಿರುದ್ಧ ಹೋರಾಡುವಂತೆ ಮಾಡಿದರು. ಈ ಹೋರಾಟ ನಿರಂತರವಾಗಿದೆ. ಅಂತೆಯೇ ಶಿವಗಂಗಾ ಅವರ ಇಲ್ಲಿನ ಲೇಖನಗಳು 12 ಮತ್ತು 21ನೇ ಶತಮಾನದ ಮಧ್ಯದ ಸೇತುವೆಯಂತೆ ಕಾಣುತ್ತವೆ. ಹೋರಾಟಕ್ಕೆ ಹೊಸ ಚೈತನ್ಯ ತುಂಬುವಲೇಖನಗಳಿವು ಎನ್ನುತ್ತಾರೆ ಹಿರಿಯ ಲೇಖಕ ರಂಜಾನ್ ದರ್ಗಾ

About the Author

ಶಿವಗಂಗಾ ರುಮ್ಮಾ
(01 January 1969)

ಶಿವಗಂಗಾ ರುಮ್ಮಾ ಜನವರಿ 1, 1969 ರಲ್ಲಿ ಜನಿಸಿದರು. ಚಿಂತಕರು, ಬಸವತತ್ತ್ವ ಹಾಗೂ ಕಾರ್ಲ್ ಮಾರ್ಕ್ಸ್ ತತ್ತ್ವಗಳನ್ನು ಅಧ್ಯಯನ ಮಾಡಿದವರು. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದು, ಪ್ರಭಾರಿ ಕುಲಸಚಿವರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಕ್ಕನಾಗಮ್ಮ, ನೀಲಾಂಬಿಕೆ, ಬಂದೂಕಿನ ಬಾಯ ಗುಬ್ಬಿ ಗೂಡು, ಕಾಲದ ಮಾಯೆ, ನೀರ ನುಡಿ, ಹೊತ್ತು ಹೋಗದ ಮುನ್ನ, ತಳಕ್ಕೆ ನೀರೆರೆದರೆ ಮೊದಲಾದ ಕೃತಿಗಳನ್ನು ರಚಿಸಿದ್ದಲ್ಲದೇ,   "ನಡುಗನ್ನಡ ಸಾಹಿತ್ಯ" ಸಂಗ್ರಹ, 371 (ಜೆ)  ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ, ಮತ್ತು ಆದಿಲ್ ಶಾಹಿ ಕಾಲದ ಕರ್ನಾಟಕದ ಬಹು ಸಂಸ್ಕೃತಿ  ಮೊದಲಾದ ಕೃತಿಗಳನ್ನು ...

READ MORE

Related Books