ಈಗ ಭಾರತ ಮಾತಾಡಬೇಕಾಗಿದೆ

Author : ಶಶಿಕಾಂತ ಸೇಂಥಿಲ್

Pages 88

₹ 70.00




Year of Publication: 2025
Published by: ಕಿರಂ ಪ್ರಕಾಶನ
Address: #173, 7th main, 24th `c' ಕ್ರಾಸ್‌, ನಾಗರಬಾವಿ main road, ಗೋವಿಂದರಾಜನಗರ, ಬೆಂಗಳೂರು
Phone: 7090180999

Synopsys

`ಈಗ ಭಾರತ ಮಾತಾಡಬೇಕಾಗಿದೆ’ ಶಶಿಕಾಂತ ಸೆಂಥಿಲ್‌, ಎ. ಎಸ್‌. ಪುತ್ತಿಗೆ ಹಾಗೂ ದೇವನೂರ ಮಹಾದೇವ ಅವರು ರಚಿಸಿರುವ ಕೃತಿಯಾಗಿದೆ. ರಾಷ್ಟ್ರೀಯತೆ, ದೇಶಭಕ್ತಿಗಳ ಹೆಸರುಗಳಲ್ಲಿ ಜನರಲ್ಲಿ ಕಲಹಗಳನ್ನು ಉಂಟುಮಾಡುತ್ತಿರುವ ಹಾಗೂ ದೇವರು ಧರ್ಮಗಳ ಹೆಸರುಗಳಲ್ಲಿ ಒಂದು ದೇಶದ ಐಕ್ಯತೆಯಲ್ಲಿ ಒಡಕುಗಳನ್ನು ಉಂಟುಮಾಡುತ್ತಿರುವ ಧರ್ಮಿಯರ ಸೋಗಿನಲ್ಲಿ ಅಧಾರ್ಮಿಕತೆಯನ್ನು ಬಿತ್ತುತ್ತಿರುವವರ ಮನೋಧರ್ಮಕ್ಕೆ ಹುಟ್ಟಿದ ರೂಪಕದಂತಿವೆ. ಧರ್ಮಕ್ಕಾಗಿ ಹಿಂಸೆ ಕೊಲೆಗಳ ಕೂಪಕ್ಕೆ ಜನರನ್ನು ದೂಡಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಿರುವವರ ಮನೋ- ಧರ್ಮವನ್ನು ಈ ಬರಹ ವಿಷಾದಪಡಿಸುತ್ತದೆ. ರಾಜ್ಯ ಮತ್ತು ರಾಷ್ಟ್ರಗಳಲ್ಲಿ ತಲೆದೋರಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮಾರ್ಗೋಪಾಯಗಳನ್ನು ಶೋಧಿಸಬೇಕಾದ ಪ್ರಭುತ್ವಗಳು ಮತಧರ್ಮಗಳ ಅಫೀಮನ್ನು ಬಿತ್ತುತ್ತಿರುವುದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ 'ವಿದ್ಯಾರ್ಥಿ ಮತ್ತು ಯುವಜನತೆ ಹೆಚ್ಚು ಮಾತನಾಡಬೇಕಿದೆ' ಎಂಬ ಆಗ್ರಹವನ್ನು ಈ ಕಿರುಹೊತ್ತಿಗೆಯಲ್ಲಿ ನಾವು ಆಲಿಸಬಹುದಾಗಿದೆ.

About the Author

ಶಶಿಕಾಂತ ಸೇಂಥಿಲ್

ತಮಿಳುನಾಡು ಮೂಲದ ಶಶಿಕಾಂತ ಸೇಂಥಿಲ್ ಅವರು 2009ನೇ ವರ್ಷದ ಐಎಎಸ್ ಅಧಿಕಾರಿ. ಎಂಜಿನಿಯರಿಂಗ್ ಪದವೀಧರರು. ಕರ್ನಾಟಕ ರಾಜ್ಯ ಗಣಿ ಹಾಗೂ ಭೂವಿಜ್ನಾನ ಇಲಾಖೆಯ ನಿರ್ದೆಶಕರಾಗಿ ಹಾಗೂ ರಾಜ್ಯದ ವಿವಿಧ ಜಿ.ಪಂ. ಕಾರ್ಯ ನಿರ್ವಾಹಕಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ (2019) ರಾಜೀನಾಮೆ ನೀಡಿದ್ದರು. ‘ನಾನೇಕೆ ರಾಜೀನಾಮೆ ನೀಡಿದೆ’ ಎಂಬ ಬಗ್ಗೆ ಸಮರ್ಥನೆಗಳನ್ನು ಒಳಗೊಂಡ ಆತ್ಮಕಥೆಯನ್ನು ಈ ಕೃತಿ ಒಳಗೊಂಡಿದೆ. ...

READ MORE

Related Books