ಅಡಗಲು ಸ್ಥಳವೆಲ್ಲಿ?

Author : ನಾಗೇಶ ಹೆಗಡೆ

Pages 120

₹ 170.00




Year of Publication: 2023
Published by: ಭೂಮಿ ಬುಕ್ಸ್

Synopsys

ಲೇಖಕ ನಾಗೇಶ ಹೆಗಡೆ ಅವರ ‘ಅಡಗಲು ಸ್ಥಳವೆಲ್ಲಿ?’ ಕೃತಿಯು ವಿಜ್ಞಾನ ಸಂಬಂಧಿತ ಲೇಖನ ಸಂಕಲನವಾಗಿದೆ. ಜಗತ್ತಿನಲ್ಲಿ ನಡೆದ ಹಲವಾರು ವಿಚಾರಗಳನ್ನು ತಿಳಿಸುವ ಈ ಕೃತಿ, 1984ರಲ್ಲಿ ಭೋಪಾಲ್ ದುರಂತವನ್ನು ತಿಳಿಸುತ್ತದೆ. ಕೃತಿಯಲ್ಲಿ ನಾಗೇಶ ಹೆಗಡೆ ಅವರು ತಿಳಿಸುವ ಕೆಲವೊಂದು ವಿಚಾರಗಳು ಹೀಗಿವೆ: ಕೀಟನಾಶಕ ವಿಷಗಳ ಉತ್ಪಾದನೆಗೆ ಬೇಕಿದ್ದ ಮೂಲ ಸಂಯುಕ್ತವನ್ನು (ಮೀಥೈಲ್‌ ಐಸೊಸೈನೇಟ್‌) ಭೋಪಾಲದ ಕಾರ್ಖಾನೆ ತಯಾರಿಸುತ್ತಿತ್ತು. ಅದು ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಎನ್ನಿಸಿತು. ಆ ದುರಂತ ನಡೆದ 15 ವರ್ಷಗಳ ನಂತರ ಎಂಡೊಸಲ್ಫಾನ್‌ ದುರಂತವೂ ಕಾಸರಗೋಡಿನಲ್ಲಿ ಬೆಳಕಿಗೆ ಬಂತು. ಅದೂ ಜಗತ್ತಿನ ಅತಿ ದೊಡ್ಡ ಕೃಷಿವಿಷದ ದುರಂತ. ನಾವು ಪಾಠ ಕಲಿತೆವೆ? ಬೇರೆ ದೇಶಗಳಲ್ಲಿ ನಿಷೇಧಿಸಲಾದ 66 ಬಗೆಯ ಕೀಟವಿಷಗಳು ಈಗಲೂ ನಮ್ಮಲ್ಲಿ ಬಳಕೆಯಲ್ಲಿವೆ. ಆ 66ರ ಪೈಕಿ ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಅಪಾಯ ತರಬಲ್ಲ 27ನ್ನು ನಿಷೇಧಿಸುವ ಪ್ರಸ್ತಾವನೆಯೇನೋ ಇದೆ. ನಿಷೇಧವಾಗಿಲ್ಲ ಇನ್ನೂ. ವಿಷವಸ್ತುಗಳ ಉತ್ಪಾದಕರಿಗೆ ಒಳ್ಳೆಯದಾಗಲೆಂದು ಈ ಪ್ರಸ್ತಾವನೆಯನ್ನೇ ಆದಷ್ಟು ದುರ್ಬಲಗೊಳಿಸುವ ಮತ್ತು ನೆಪಮಟ್ಟಕ್ಕಿಳಿಸುವ ಹುನ್ನಾರ ಕಾಣುತ್ತದೆಂಬ ಟೀಕೆ ಆಗಲೇ ಬಂದಿತ್ತು. ಈಗಂತೂ ನಿಷೇಧ ಎಂದರೆ ಹಿಜಾಬ್‌ ನಿಷೇದ, ಧ್ವನಿವರ್ಧಕ ನಿಷೇಧದ ಚರ್ಚೆಗಳೇ ಮುನ್ನೆಲೆಗೆ ಬರುತ್ತಿವೆ ವಿನಾ ಜೀವರಕ್ಷಕ ವಿಷಯಗಳೆಲ್ಲ ಹಿನ್ನೆಲೆಗೆ ಹೋಗಿಬಿಟ್ಟಿವೆ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books