‘ಹಳ್ಳಿಯ ಬಾಳು’ ಕೃತಿಯು ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಶ್ರೀಮಾನ್ ಗೊರೂರು ಹಳ್ಳಿಗರ ಬಾಳನ್ನು ಸ್ವಂತವಾಗಿ ಕಂಡಿದ್ದಾರೆ. ಅನುಭವಿಸಿದ್ದಾರೆ. ಅವರ ರಸಿಕತೆಯನ್ನು ಗುರುತಿಸಿದ್ದಾರೆ. ಅವರ ಸಂಸ್ಕೃತಿಯನ್ನು ಮೆಚ್ಚಿದ್ದಾರೆ. ಅವರ ಸಾಹಿತ್ಯವನ್ನು ಅರಿತಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಹಳ್ಳಿಗರ ಬಗೆಗೆ ಅಪಾರವಾದ ಸಹಾನುಭೂತಿಯಿದೆ. ಇವೆಲ್ಲವುಗಳ ಫಲವಾಗಿ ಅವರು ಹಳ್ಳಿಯ ಬಾಳಿನ ಸೊಗಸನ್ನು ಸರಿಯಾಗಿ ಚಿತ್ರಿಸಬಲ್ಲರು. ಅದಕ್ಕೆ ಬೇಕಾದ ಲೇಖನ ಕಲೆಯೂ ಅವರಿಗೆ ಸಾಧಿಸಿದೆ.“ಲೋಕದ ಬಂಧುವಾದ ರೈತನ ಕಣದಲ್ಲಿ ರಾಶಿ ನಡೆದಿರುವಾಗ ಶ್ಯಾನುಭೋಗರು, ಪಟೇಲರು, ಜೋಯಿಸರು, ಮೇಟರು, ಪೂಜಾರಿ, ಶೇಕದಾರ, ಹಾವಾಡಿಗ, ದೊಂಬ, ಅಗಸ, ಹಜಾಮ; ಮುಂದೆ ಕುರಿಯವ, ಹಂದಿಚೀಕ, ಉಳ್ಳಹಾಕುವವನು, ಚಿತ್ರಗೊಂಬೆ, ಮುತ್ತಿಗೊಂಬೆ 'ಮಿರಾಸೆ'ಗೆ ಬರುತ್ತಾರೆ. ಇವರಲ್ಲದೆ ಮಹಾರಾಷ್ಟ್ರದ ಬುರುಡೆ ಬೆಸ್ತರು, ಉತ್ತರ ಕರ್ನಾಟಕದ ಜೋಗವ್ವಗಳು ಬೊಂಬಾಯಿ ತಮಾಷೆ ಇವರೂ ಮೈಸೂರಿನ ಹಳ್ಳಿಗಳಿಗೆ ನುಗ್ಗುವುದುಂಟು. ಇವರೆಲ್ಲರ ಮೆರವಣಿಗೆಯನ್ನು ಗ್ರಂಥಕರ್ತರು ನಮಗೆ ತೋರಿಸಿದ್ದಾರೆ ಎಂಬುದು ಇಲ್ಲಿ ವಿಶ್ಲೇಷಿತವಾಗಿದೆ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE