ಯುಗದಕವಿ ಜಗದಕವಿ

Author : ಆರ್.ಜಿ. ಹಳ್ಳಿ ನಾಗರಾಜ್

Pages 192

₹ 125.00




Year of Publication: 2003
Published by: ಅನ್ವೇಷಣಾ ಪ್ರಕಾಶನ
Address: #10-11, 1ನೇ ಮಹಡಿ, ಮಾತಾ ತಾನಿಷಾ ಅಪಾರ್ಟ್‌‌ಮೆಂಟ್‌, 4ನೇ ಅಡ್ಡರಸ್ತೆ, ಕೆಎಸ್‌ಆರ್‌ಟಿಸಿ ಲೇಔಟ್‌, ಚಿಕ್ಕಲ್ಲಸಂದ್ರ, ಬೆಂಗಳೂರು
Phone: 8026393891

Synopsys

‘ಯುಗದಕವಿ ಜಗದಕವಿ’ ಆರ್‌. ಜಿ. ಹಳ್ಳಿ ನಾಗರಾಜ್‌ ಅವರ ಸಂಪಾದಿತ ಕೃತಿಯಾಗಿದೆ. 2004 ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಮಾನೋತ್ಸವ ವರ್ಷ. ಕನ್ನಡದ ಕವಿಯಾಗಿ ವಿಚಾರಕ್ರಾಂತಿಯನ್ನು ಸಾಹಿತ್ಯದ ಮೂಲಕ ಜನರ ಬಳಿಗೊಯ್ದು ಮನುಜ ಮತ - ವಿಶ್ವಪಥಗಳೆಂಬ ಹಿರಿಯ ಆದರ್ಶಗಳನ್ನು ತೋರಿ ಜಗದಗಲ ವಿಶಾಲ ಮನೋಭಾವನೆ ಬೆಳೆಸಲು ಕರೆ ನೀಡಿದ ಕವಿಶ್ರೇಷ್ಠ ಕುವೆಂಪು, ಜಾತಿ ಮತಗಳಲ್ಲಿ ನಂಬಿಕೆಯಿಲ್ಲದ ಅವರು ತಮ್ಮ ಕವಿತೆಗಳಲ್ಲಿ ವಿಶ್ವಮಾನವ ಸಂದೇಶ ನೀಡುತ್ತ, ತಾನು ತನ್ನದೆಂಬ ಅಹಂಕಾರದಿಂದ ಮುಕ್ತನಾಗಿ ಬಾಳುವ ಸಂಕೇತವಾದ 'ಓ ನನ್ನ ಚೇತನ, ಆಗು ನೀ ಅನಿಕೇತನ' ಎಂಬ ಹಾಡಿನ ಮೂಲಕ ವಿಶ್ವವ್ಯಾಪಿ ಚೈತನ್ಯದ ಸುಂದರ ಕಲ್ಪನೆಯನ್ನು ಮುಂದಿಟ್ಟಿದ್ದಾರೆ

About the Author

ಆರ್.ಜಿ. ಹಳ್ಳಿ ನಾಗರಾಜ್

ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...

READ MORE

Reviews

ಹೊಸತು-2004- ಡಿಸೆಂಬರ್‌

2004 ರಾಷ್ಟ್ರಕವಿ ಕುವೆಂಪು ಅವರ ಜನ್ಮಶತಮಾನೋತ್ಸವ ವರ್ಷ. ಕನ್ನಡದ ಕವಿಯಾಗಿ ವಿಚಾರಕ್ರಾಂತಿಯನ್ನು ಸಾಹಿತ್ಯದ ಮೂಲಕ ಜನರ ಬಳಿಗೊಯ್ದು ಮನುಜ ಮತ - ವಿಶ್ವಪಥ ಗಳೆಂಬ ಹಿರಿಯ ಆದರ್ಶಗಳನ್ನು ತೋರಿ ಜಗದಗಲ ವಿಶಾಲ ಮನೋಭಾವನೆ ಬೆಳೆಸಲು ಕರೆ ನೀಡಿದ ಕವಿಶ್ರೇಷ್ಠ ಕುವೆಂಪು, ಜಾತಿ ಮತಗಳಲ್ಲಿ ನಂಬಿಕೆಯಿಲ್ಲದ ಅವರು ತಮ್ಮ ಕವಿತೆಗಳಲ್ಲಿ ವಿಶ್ವಮಾನವ ಸಂದೇಶ ನೀಡುತ್ತ, ತಾನು ತನ್ನದೆಂಬ ಅಹಂಕಾರದಿಂದ ಮುಕ್ತನಾಗಿ ಬಾಳುವ ಸಂಕೇತವಾದ 'ಓ ನನ್ನ ಚೇತನ, ಆಗು ನೀ ಅನಿಕೇತನ' ಎಂಬ ಹಾಡಿನ ಮೂಲಕ ವಿಶ್ವವ್ಯಾಪಿ ಚೈತನ್ಯದ ಸುಂದರ ಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಮಹಾ ಕಾವ್ಯಗಳಲ್ಲಿ ದನಿಯಿಲ್ಲದೆ ಸೊರಗಿದ ನಿರ್ಲಕ್ಷಿತ ಪಾತ್ರಗಳಿಗೆ ಮಾನವೀಯ ಸ್ಪರ್ಶದ ಮರುಹುಟ್ಟು ನೀಡಿದ ಅವರ ಸಾಹಿತ್ಯದಲ್ಲಿ 'ಶ್ರೀ ರಾಮಾಯಣ ದರ್ಶನಂ' ಕೃತಿಗೆ ಎತ್ತರದ ಜ್ಞಾನಪೀಠ ಪ್ರಶಸ್ತಿ ಲಭ್ಯ. ಕುವೆಂಪು ಮತ್ತು ಅವರ ಸಾಹಿತ್ಯವನ್ನಿಲ್ಲಿ ವಿಶ್ಲೇಷಿಸಲಾಗಿದೆ.

Related Books