ಲೇಖಕ ಎಸ್. ಚೌಡೇಶ ಅವರ ’ಕಾಲ ಕಣ್ಣಿಯ ಹರಿದು’ ಕೃತಿಯು ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಈ ಕೃತಿಯನ್ನು ಎರಡು ಪ್ರಧಾನ ಭಾಗಗಳಿಂದ ವಿಂಗಡಿಸಬಹುದಾಗಿದ್ದು, ಮೊದಲನೇ ಭಾಗವಾಗಿ ಮೌಖಿಕ ಕಾವ್ಯವನ್ನು ಅದರಲ್ಲೂ ಹೊಲೆ ಮಾದಿಗ ಸಾಂಸ್ಕೃತಿಕ ತತ್ವಗಳನ್ನ ಶೋಧಿಸಲು ಯತ್ನಿಸಿದ್ದಾರೆ. ಎರಡನೆಯ ಭಾಗದಲ್ಲಿ ಜೀವತತ್ವಕ್ಕೆ ಉಪಧಾರೆಯಂತೆ ಸಂಬಂಧಿತ ಆತ್ಮಕಥೆಗಳ ಪರಿಶೀಲನೆಯ ಕಟ್ಟನ್ನು ನೀಡಿದ್ದಾರೆ.
ಕೃತಿಗೆ ಮುನ್ನುಡಿ ಬರೆದಿರುವ ಶಿವಕುಮಾರ ಕಂಪ್ಲಿ ಅವರು, ಮೂಲತಃ ಸೂಕ್ಷ್ಮ ಅಧ್ಯಯನಶೀಲರಾದ ಡಾ. ಚೌಡೇಶ್ ಸಮದೇವನವರ ಈ ಕೃತಿಯ ಮೂಲಕ ಅಲಕ್ಷಿತ ಜೀವ ಸಮುದಾಯಗಳ ಒಲವನ್ನು, ಅರಿವನ್ನು ಸಮರ್ಥವಾಗಿ ಬಿಡಿಸಿ, ತೋರಲು ಯತ್ನಿಸಿದ್ದಾರೆ. ಜೀವ ಪರ ಶೋಧನೆಯ ಹಾದಿಯಲ್ಲಿ ಸಂಸ್ಕೃತೀಕರಣದಿಂದ ಔನ್ನತ್ಯಕ್ಕೆ ಏರಿದ ತಳಸಮುದಾಯಗಳು ಬಸವಣ್ಣನ ನಂತರ ಹೇಗೆ ಅಲಕ್ಷಿತವಾದವು ಎಂಬ ಅಂಶವನ್ನು ಇವರ ‘ಬಾಲಬಸವರು ’ ಲೇಖನ ಉಲ್ಲೇಖಿಸುತ್ತದೆ. ಮಾಂಸಹಾರವನ್ನು ತ್ಯಜಿಸಿ ಮಾದಿಗರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಇವರು ಧಾರ್ಮಿಕವಾಗಿ ಅತಂತ್ರ ಸ್ಥಿತಿಯಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ. ಈ ನೆಲೆಯಲ್ಲಿ ಲೇಖಕರು ವಿವರಿಸಿರುವ ಕಾಲಜ್ಞಾನ ಮತ್ತು ಮೌಖಿಕ ಕಾವ್ಯ ಪರಂಪರೆ ಕುರಿತು ಈಗಾಗಲೇ ನಡೆದ ಅಧ್ಯಯನಗಳ ಪ್ರಕ್ರಿಯೆಯ ಚೌಕಟ್ಟನ್ನು ಹಾಕಿಕೊಂಡು, ವಿಚಾರದ ಹುರುಹುವನ್ನು ಎತ್ತರಿಸಿಕೊಂಡಿದ್ದಾರೆ. ಆದರೆ ಲೇಖಕರು ಇಲ್ಲಿ ಆಯಾ ಆದ್ಯತೆಗಳ ಭಿನ್ನತೆಗಳನ್ನು ಗುರ್ತಿಸಿಲ್ಲ. ಬದಲಾಗಿ ಹಲವು ವರ್ಗಗಳ ಕಾಲಜ್ಞಾನಗಳನ್ನು ಪರಿಚಯಿಸಿದ್ದಾರೆ ’ ಎಂದಿದ್ದಾರೆ.
ಎಸ್. ಚೌಂಡೇಶ್ ಅವರು ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಅಂಬೇಡ್ಕರ್ ನಗರದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಕಾಲ ಕಣ್ಣಿಯ ಹರಿದು ...
READ MORE