‘W.T.O. ಜಾಗತೀಕರಣ ಮತ್ತು ಗ್ರಾಮಭಾರತ’ ಪತ್ರಿಕಾ ವರದಿಗಳು, ಆಧಾರಗ್ರಂಥ ಮತ್ತು ಹಲವು ಲೇಖನಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಪ್ರೌಢ ಮಹಾಪ್ರಬಂಧ. ಈ ಮುಖ್ಯ ಮಾಹಿತಿಗಳ ಸಂಗ್ರಹವಾಗಿರುವ ಈ ಕೃತಿ ಉದಾರೀಕರಣದ ಕ್ರೌರ್ಯವನ್ನು ನಮ್ಮ ಮುಂದಿಡುತ್ತದೆ. ಕೆಲವು ರಾಷ್ಟ್ರಗಳ ಪಾಲಿಗೆ ಹುಲಿಯ ಸವಾರಿಯಾಗಿರುವ ಉದಾರೀಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಉಳ್ಳವರಿಗೆ ಇನ್ನಷ್ಟು ಬಾಚಿಕೊಳ್ಳುವ ಅವಕಾಶವಾಗಿದೆ. ಈ ಮಹತ್ತರ ವಿಷಯಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ಗಮನದಲ್ಲಿಟ್ಟು ಅನೇಕ ಅಂಕಿ-ಅಂಶಗಳನ್ನು ನಮ್ಮ ಮುಂದಿಡುತ್ತದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...
READ MOREಜಾಗತೀಕರಣ ಮತ್ತು ಗ್ರಾಮ ಭಾರತ: ಪುಸ್ತಕ ಪ್ರೀತಿ
ಪುಸ್ತಕ ಪರಿಚಯ- ಕೃಪೆ- ಹೊಸತು
ಬಹಳಷ್ಟು ಪತ್ರಿಕಾ ವರದಿಗಳು, ಆಧಾರಗ್ರಂಥಗಳು ಮತ್ತು ಲೇಖನಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿರುವ ಪ್ರೌಢ ಮಹಾಪ್ರಬಂಧ. ಇದು ಇಂದಿಗೆ ಅತಿ ಅಗತ್ಯವಾದ ಮಾಹಿತಿಗಳ ಸಂಗ್ರಹವಾಗಿದೆ. ಉದಾರೀಕರಣಗಳು ಕೆಲವು ರಾಷ್ಟ್ರಗಳ ಪಾಲಿಗಂತೂ ಹುಲಿಯ ಸವಾರಿಯಂತಾಗಿ ಕೆಳಗಿಳಿಯಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳವರಿಗೆ ಇನ್ನಷ್ಟು ಬಾಚಿಕೊಳ್ಳುವ ಅವಕಾಶದಿಂದಾಗಿ ಬಡ ಬೋರೇಗೌಡನನ್ನು ಗುರುತೇ ಹಿಡಿಯುವವರಿಲ್ಲವಾಗಿದೆ. ಇಲ್ಲಿ ತಿಳಿಸಿರುವ ಸಂಗತಿಗಳು ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ಗಮನದಲ್ಲಿಟ್ಟು ಅನೇಕ ಅಂಕಿಅಂಶಗಳನ್ನು ಪ್ರಸ್ತುತಪಡಿಸಿವೆ.