ಮೂವರು ಮಹಮದರು

Author : ಪಿ. ಚಂದ್ರಿಕಾ

Pages 208

₹ 250.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 70191 82729

Synopsys

ಮೂವರು ಮಹಮದರು ಚಂದ್ರಿಕಾ. ಪಿ ಅವರ ಕೃತಿಯಾಗಿದೆ. ಈ ಕೃತಿಯ ಹೆಚ್ಚುಗಾರಿಕೆ ಇರುವುದೇ ಆ ಘಮಲನ್ನು ಸೆರೆ ಹಿಡಿಯುವುದರಲ್ಲಿ. ಚಿತ್ರೀಕರಣ ಸಂದರ್ಭದಲ್ಲಿ ಸಾಧಿಸಿದ ಆವಿರ್ಭವಿಸಿದ ಘಟನೆಗಳ ಕಾರ್ಯಕಾರಣ ಸಂಬಂಧಗಳ ದಾಖಲಾಗುವುದಷ್ಟೇ ಈ ಕೃತಿಯ ಉದ್ದೇಶವಾಗಿದ್ದಿದ್ದರೆ, ಕೃತಿಯ ಆಶಯ ಸೀಮಿತವಾಗಿರುತ್ತಿತ್ತು. ಆಗ ಈ ಕೃತಿಗೆ ಸಿನಿಮಾ ಸೃಷ್ಟಿಯಲ್ಲಿನ ತೆರೆಯ ಹಿಂದಿನ ಸೋಲು ಗೆಲುವಿನ ದಾಖಲೆಯಾಗಿ, ರಂಜನೀಯಗುಣ ಮಾತ್ರ ಪಡೆಯುತ್ತಿತ್ತು. ಆದರೆ ಚಂದ್ರಿಕಾ ಅವರ ಕಣ್ಣು ಸೆರೆ ಹಿಡಿಯಹೊರಟದ್ದು ಬೇರೊಂದು ಘಮಲನ್ನು. ತೆರೆಯ ಆಚೆಗಿರುವ ಸ್ಥಳೀಯರ ಜನಜೀವನವನ್ನು ದಾಖಲಿಸುವುದರೊಂದಿಗೇ ಈ ಸಿನೆಮಾ ಶೂಟಿಂಗ್ ನೆಪವಾಗಿ ಅವರ ಜೀವನ ತೆರೆದುಕೊಳ್ಳುತ್ತಾ ಹೋಗುವುದನ್ನು ದಾಖಲಿಸುತ್ತಾರೆ. (ಮೃಣಾಲ್ ಸೇನ್‌ರ `ಅಕಾಲೆರ್ ಸಂಧಾನೆ’ ಚಿತ್ರದಂತೆ ಶ್ಯಾಮ್ ಬೆನಗಲ್ ಅವರ `ಸಮರ್’ ಚಿತ್ರದಲ್ಲಾಗುವಂತೆ) ಹಾಗಾಗಿ ತೆರೆಯ ಮೇಲೆ ಪಂಚಾಕ್ಷರಿಯವರು ಹಾಗೂ ಬೋಳುವಾರರು ಚಿತ್ರಿಸುತ್ತಿರುವ ಪಾತುಮ್ಮ, ಚಂದ್ರಣ್ಣ ಆಚಾರಿ ಅವರ ಆಸೆ, ಅಭಿಲಾಷೆ, ಹುನ್ನಾರ ಅನಾವರಣಗೊಳ್ಳುತ್ತಾ ಹೋದಂತೆ, ಚಂದ್ರಿಕಾ ಅವರು ಚಿತ್ರಿಸಿದ ಅಲೀಮಮ್ಮ, ಹಸೀನಮ್ಮ, ಜಕ್ಕು ಮಹಮದರೂ ಆಪ್ತವಾಗುತ್ತಾ ಹೋಗುತ್ತಾರೆ. ಆ ಊರಿನ ಮುಸ್ಲೀಂ ಸಮುದಾಯದ ಹೆಂಗಸರ ವ್ಯಕ್ತಿತ್ವ, ಕನಸುಗಳು, ಆಸೆಗಳನ್ನು ಈ ಲೇಖನಗಳು ಹೊಳೆಯಿಸುವುದು ಆ ಹೆಂಗಸರ ದೈನಂದಿಕದಲ್ಲೇ. ಬೀಡಿಕಟ್ಟುತ್ತಲೇ `ನಿಮ್ಮ ಸಂಬಳವೆಷ್ಟು?’, `ಮಗನನ್ನು ಇಷ್ಟು ದಿನ ಬಿಟ್ಟಿರಲು ಸಾಧ್ಯವೇ?’ ಎಂದು ಕೇಳಿ ಆಶ್ಚರ್ಯ ಪಡುವ ಮುಕ್ಕಚೇರಿಯ ಹೆಂಗಸರು, ತನ್ನ ಗಂಡನ ಸೌಂದರ್ಯವನ್ನು ವಿವರಿಸುತ್ತಾ ನಾಚುವ ಅಲೀಮಮ್ಮ, ಸಸ್ಯಾಹಾರಿಯಾದ ಚಂದ್ರಿಕಾರಿಗೆ ಅವಲಕ್ಕಿ ಮಾಡಿಕೊಡುವ ಹಸೀನಮ್ಮ, ನಿರ್ಜನ ಕುದ್ರುವಿನಲ್ಲೇ ಜೀವನ ನಡೆಸುತ್ತಾ `ಭಯ ಎಂದರೆ ಏನು?’ ಎಂದು ಕೇಳುವ ಫ್ರೀಡಾ, ತನ್ನ ಚಿಕ್ಕ ತಮ್ಮನನ್ನು ಮಾತಾಡಿಸಲಿಲ್ಲ ಎಂದು ಸಿಟ್ಟುಗೊಳ್ಳುವ ಮೆಹರ್- ಹೀಗೆ ಕಿರು ಕಥಾನಕಗಳಲ್ಲೇ ಕೃತಿಯು ಚಿಕ್ಕದ್ದರ ಮೂಲಕ ಮಹತ್ವವಾದ್ದನ್ನು ಹೇಳುತ್ತದೆ.

About the Author

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...

READ MORE

Related Books