ಅಲ್ಲಿ ಕಂಡ ಮುಖ

Author : ಪಾರ್ವತೀಶ ಬಿಳಿದಾಳೆ

Pages 202

₹ 120.00




Year of Publication: 2014
Published by: ಕಾವ್ಯಕಲಾ ಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು - 560040
Phone: 9964124831

Synopsys

ಸಾಮಾಜಿಕ ಆಂದೋಲನಗಳಲ್ಲಿ ಹಾಗೂ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲರಾಗಿರುವ ಪಾರ್ವತೀಶ ಬಿಳಿದಾಳೆಯವರು ಕೃಷಿಕರೂ ಹೌದು. ಈ ಪುಸ್ತಕದಲ್ಲಿರುವ ಅನೇಕ ಬಿಡಿ ಚಿತ್ರಗಳ ಕುರಿತಾದ ಲೇಖನಗಳು ವೈವಿಧ್ಯಮಯ ವ್ಯಕ್ತಿಗಳನ್ನು ಕುರಿತುದಾಗಿದೆ. ಒಬ್ಬ ದಲಿತ ವಿಜ್ಞಾನಿಯ ಬದುಕು, ಜೊತೆಯಲ್ಲೇ ಮಣ್ಣು, ರೈತ,ಭಾಷೆ, ಸಂಸ್ಕೃತಿ ಇತ್ಯಾದಿ ಲೇಖನಗಳ ಜೊತೆಯಲ್ಲೇ ಕ್ರಿಕೆಟ್ ತಾರೆಯ ಬಗ್ಗೆ,ಇಂಗ್ಲೆಂಡಿನ ರಾಜಮನೆತನದ ಬಗ್ಗೆ ಹೀಗೆ ವಿಭಿನ್ನ ವಸ್ತುಗಳನ್ನು ಅವರು ತಮ್ಮ ಲೇಖನಿ ಮೂಲಕ ಸ್ಪರ್ಶಿಸಿದ್ದಾರೆ. ಅವರ ಬರವಣಿಗೆಯ ಕಸುಬುಗಾರಿಕೆ ಅರಿಯಲು ಉತ್ತಮ ಪುಸ್ತಕ ’ಅಲ್ಲಿ ಕಂಡ ಮುಖ’.

About the Author

ಪಾರ್ವತೀಶ ಬಿಳಿದಾಳೆ

ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ...

READ MORE

Related Books