ಕನ್ನಡ ಕವಿತೆಗಳ ಕುರಿತು ಲೇಖನಗಳ ಸಂಗ್ರಹದ ಕೃತಿ ಇದಾಗಿದೆ. ಕವಿತೆಯನ್ನು ಅದರ ಭಾಷಿಕ ನೆಲೆಯಲ್ಲಿ ಆಸ್ವಾದಿಸುತ್ತಲೇ ಅದನ್ನು ಸಂಸ್ಕೃತಿಯ ಮುಖ್ಯ ಜಿಜ್ಞಾಸೆಗಳೊಂದಿಗೆ ಬೆಸೆಯುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಹಲವು ಪಂಥ ಪೀಳಿಗೆಗಳಿಗೆ ಸೇರಿದ ಕವಿತೆಗಳೊಂದಿಗೆ ಟಿ.ಪಿ.ಅಶೋಕರು ನಡೆಸಿರುವ ಅನುಸಂಧಾನವು ಹೊಸ ಓದುಗರಲ್ಲಿ ಕಾವ್ಯದ ಬಗ್ಗೆ ಉತ್ಸಾಹ ಹುಟ್ಟಿಸುವಂತಿದೆ; ಸಹವಿಮರ್ಶಕರನ್ನು ಹೊಸ ಚರ್ಚೆಗಳಿಗೆ ಆಹ್ವಾನಿಸುವಂತಿದೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE