ಕನ್ನಡ ನಾಡು ನುಡಿ ಬೆಳವಣಿಗೆಗೆ ಶ್ರಮಿಸಿದರ ಕುರಿತು ಒಂದು ಸ್ಪಷ್ಟ ಚಿತ್ರಣವನ್ನು ನೀಡುವ ವೈಚಾರಿಕ ಬರೆಹಗಳು ಇಲ್ಲಿವೆ. ಕವಿಯಾಗಿ ಹೆಸರಾಗಿರುವ ಕೆ.ಎಸ್. ನಿಸಾರ ಅಹಮದ್ ಅವರು ಗಂಭೀರ ಚಿಂತನ ಬರೆಹವನ್ನು ಮನೋಜ್ಞವಾಗಿ ಬರೆಯಬಲ್ಲರು ಎಂಬುದಕ್ಕೆ ‘ಹಿರಿಯರು ಹರಸಿದ ಹೆದ್ದಾರಿ’ ಕೃತಿ ಸಾಕ್ಷಿಯಾಗಿದೆ.
`ಕನ್ನಡದ ನುಡಿ ಮುಡಿಗೆ ಕುರ್‌ಆನ್‌ನ ಸಿರಿ ಕೊಡುಗೆ, ಇಸ್ಲಾಮೀ ಅಧ್ಯಾತ್ಮದ ಸೀಮಾಸಾಧಕರು : ಸೂಫಿಗಳು, ಮುಳ್ಳಿನ ಮಕುಟದ ಮಸೀಹ, ಜೀವನ ಚರಿತ್ರೆಗಳಲ್ಲಿ ಕಳಶಪ್ರಾಯ, ನಾಗರಿಕ ನರ ಪ್ರಾಣಿಯ ನಿಷ್ಕರುಣ ಕಥನ, ಬದುಕನ್ನು ಪ್ರೀತಿಸುವ 'ಲೈಮ್ ಲೈಟ್', ಯುಗ ಪ್ರವರ್ತಕ ವಿಜ್ಞಾನಿಯ ಯಜಮಾನ ಕೃತಿ, ಮಾನವ ಮನೋಗತಿಯ ಮಹಾ ದಾಖಲೆಗಾರ: ಷೇಕ್ಸ್‌ಪಿಯರ್’ ಮುಂತಾದ ಬರೆಹಗಳ ಸಂಕಲನ ಇದಾಗಿದೆ.
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE