'ಸಖ್ಯದ ಆಖ್ಯಾನ' ಇದು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕೃತಿಯಾಗಿದ್ದು, ಕನ್ನಡ ಲೇಖಕ-ಕವಿಗಳ ಜೊತೆಗಿನ ಒಡನಾಟವನ್ನು ದಾಖಲಿಸುವ 'ಸಖ್ಯದ ಆಖ್ಯಾನ' ಸಂಕಲನವು ಒಟ್ಟು ಒಂಭತ್ತು ಬರೆಹಗಳನ್ನು ಒಳಗೊಂಡಿದೆ. ಅವುಗಳಲ್ಲಿ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡ ಮತ್ತು ಸಂಗೀತ ಶಿಖರ ಮಲ್ಲಿಕಾರ್ಜುನ ಮನಸೂರ ಕುರಿತ ಕೌತುಕದ ನೆನಪುಗಳೂ ಸೇರಿವೆ. ದಟ್ಟ ನೆನಪಿನ ಓಣಿಯಲ್ಲಿ ಓಡಾಡುತ್ತ ಅಲ್ಲಿನ ವ್ಯಕ್ತಿ ವಿವರ, ಘಟನೆ- ಸಂಗತಿಗಳನ್ನು ಕರಾರುವಾಕ್ಕಾಗಿ ಪದಕ್ಕಿಳಿಸುವ ಕೌಶಲ ಪಟ್ಟಣಶೆಟ್ಟರಿಗೆ ಸಿದ್ದಿಸಿದೆ. ಹಾಗೆ ದಾಖಲಿಸುವಾಗ ಅದರ ತಾಜಾತನ ಕಳೆದುಹೋಗದಂತೆ ಅವರು ಬರೆಯಬಲ್ಲರು. ಈ ಪ್ರಬಂಧಗಳಲ್ಲಿ ಆಪ್ತತೆಯ ಜೊತೆಗೆ 'ಅಂತರ' ಕಾದಿಟ್ಟುಕೊಂಡ 'ಗ್ರಹಿಕೆ' ಕೂಡ ದಾಖಲಾಗಿದೆ. ಈ ಮಾತು ಕೇವಲ ಗಿರೀಶ ಕಾರ್ನಾಡ ಮತ್ತು ಸುಮತೀಂದ್ರ ನಾಡಿಗ ಕುರಿತ ಬರೆಹಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಟ್ಟು ಸಂಕಲನದ ಎಲ್ಲ ಬರೆಹಗಳಿಗೂ ಅದು ಅನ್ವಯಿಸುತ್ತದೆ. ಒಡನಾಟದ ನೆನಪುಗಳನ್ನು ದಾಖಲಿಸುವಾಗ ಪಟ್ಟಣಶೆಟ್ಟರು ಒದಗಿಸುವ ಅತ್ಯಂತ ಸಣ್ಣ ಮತ್ತು ಸೂಕ್ಷ್ಮ ವಿವರಗಳು ಲೇಖಕನ ಹಾಗೂ ವಸ್ತುಗಳೆರಡರ ವಿಭಿನ್ನ-ವಿಶಿಷ್ಟ ವ್ಯಕ್ತಿತ್ವದ ಆನಾವರಣಕ್ಕೆ ಕಾರಣವಾಗುತ್ತವೆ. ಕನ್ನಡ ಸಾಹಿತ್ಯ ಚರಿತ್ರೆಗೆ ಹೊಸ ವಿವರಗಳನ್ನು ಸೇರಿಸುವ ಮೂಲಕ ಚಾರಿತ್ರಿಕ ಮಹತ್ವ ಪಡೆಯುವ ಈ ಬರೆಹಗಳು ಕುತೂಹಲ- ಆಸಕ್ತಿಗಳ ಜೊತೆಯಲ್ಲಿಯೇ ಸಂಶೋಧನ ಗುಣವನ್ನೂ ಹೊಂದಿವೆ. ವಿಮರ್ಶಾತ್ಮಕ ಒಳನೋಟಗಳನ್ನೂ ನೀಡುತ್ತವೆ. ಸಾಂಸ್ಕೃತಿಕ ಮಹತ್ವದ ಬರೆಹವಾಗಿ ಪರಿಣಮಿಸುತ್ತವೆ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE