ರವೀಂದ್ರ ಭಟ್ಟ ಅವರು ಬರೆದ ಲೇಖನಗಳ ಸಂಕಲನ ‘ಮೈಸೂರೆಂಬ ಬೆರಗು’. ಅವರು ಪ್ರಜಾವಾಣಿ ಹಾಗೂ ಸುಧಾ ಪತ್ರಿಕೆಗಳಲ್ಲಿ ಮೈಸೂರಿನ ಬಗ್ಗೆ ಬರೆದ ಲೇಖನಗಳನ್ನು ಸಂಗ್ರಹಿಸಿ ಈ ಸಂಕಲನವನ್ನು ಹೊರತರಲಾಗಿದೆ. ಕೃತಿಯ ಪರಿವಿಡಿಯಲ್ಲಿ ಲಲಿತಾ ನಾಯಕರ ಮೈಸೂರು ನೆನಪು, ದಸರೆಗೆ ಬಂದ ಗುರು, ಹಾದಿಬೀದಿಯಲ್ಲಿ ಕುವೆಂಪು ಕಂಪು, ಪಂಜರದ ನೆಂಟರಿಗೆ ಊಟೋಪಚಾರ, ಪರಿಸರ ಸ್ನೇಹಿ ನೈರ್ಮಲ್ಯ ಪಾರ್ಕ್, ಅನಾಥ ಮಹಿಳೆಯರ ಆಶಾದೀಪ, ಮೊದಲಿಯಾರಕುಪ್ಪಂ ಮೈಸೂರು ಕಾಲೋನಿ, ಮೈಸೂರಿಗೂ ಬಂತು ಅರ್ಬನ್ ಹಾತ್!, ಕಾವೇರಿ ನೋಡಲು..ಕೊಳವೆ ಬಾವಿ ನೀರು ಕುಡಿಯಲು.., ಜನಹಿತದ ‘ಮಹಾರಾಜ’ ಪಥ ಸೇರಿದಂತೆ 69 ಶೀರ್ಷಿಕೆಗಳ ಮೈಸೂರು ಬಗೆಗಿನ ಲೇಖನಗಳು ಈ ಕೃತಿಯಲ್ಲಿವೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE