‘ಮನದ ಮಾತು’ ಕೃತಿಯು ರಾಜುಕುಮಾರ ಕುಲಕರ್ಣಿ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಗವಿಸಿದ್ದಪ್ಪ ಎಚ್. ಪಾಟೀಲ ಅವರು, ‘ಈ ಕೃತಿಯು ವೈಚಾರಿಕವಾದ ಚಿಂತನೆಗಳನ್ನು ಒಳಗೊಂಡಿದೆ. ಬಹುಮುಖಿ ವ್ಯಕ್ತಿಗಳ, ಮಹಾನ್ ಸಾಧಕರ, ಕೃತಿಗಳ ವಿಮರ್ಶಾತ್ಮಕ ನೋಟ ಇದರಲ್ಲಿ ಅಳವಡಿಸಿ ಕೊಳ್ಳಲಾಗಿದೆ. ವೈಚಾರಿಕ ವಿಮರ್ಶಾತ್ಮಕ ಅಧ್ಯಯನ ಇಲ್ಲಿ ಕಾಣಬಹುದಾಗಿದೆ. ಸರಾಗವಾಗಿ ಚಿಂತನೆಯ ಲೇಖನಗಳನ್ನು ಮನದ ಮಾತುಗಳ ಮೂಲಕ ಹರಿಬಿಟ್ಟಿದ್ದಾರೆ ಲೇಖಕ’ ಎಂದಿದ್ದಾರೆ.
ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ) ...
READ MORE