‘ಅಕ್ಕಮಹಾದೇವಿತ್ವದ ಹಲವು ಎತ್ತರಗಳು’ ಡಾ. ಗಂಗಮ್ಮ ಸತ್ಯಂಪೇಟೆ ಅವರ ಕೃತಿ. ವಚನ ಚಳವಳಿಯ ಕಾಲಘಟ್ಟದಲ್ಲಿ ಅಕ್ಕಮಹಾದೇವಿಯವರ ಬದುಕು ಬರೆಹಗಳು ಹೇಗಿತ್ತು ಆಕೆಯನ್ನು ಅಕ್ಕನಾಗಿ ರೂಪಿಸಿದ ಮಹತ್ವದ ವಿಚಾರಗಳು ಯಾವವು ಎಂಬುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ವಿಚಾರ ಪತ್ನಿಯಾಗಿ ಬಸವಣ್ಣನೊಂದಿಗೆ ಬದುಕು ಮಾಡಿದೆನೆಂದು ನೀಲಲೋಚನೆ ಹೇಳುತ್ತಾಳೆ. ಕೂಟಕ್ಕೆ ಸತಿಪತಿಯಲ್ಲದೇ ಜ್ಞಾನಕ್ಕೆ ಸತಿಪತಿಯೇ ಎಂದು ಆಯ್ದಕ್ಕಿ ಲಕ್ಕಮ್ಮ ಗಂಡನಿಗೆ ಪ್ರಶ್ನಿಸುತ್ತಾಳೆ. ಇದು ವೀರಶೈವ ಮಹಿಳೆಯ ವಿಚಾರಪಥ. 800 ವರ್ಷಗಳ ಹಿಂದೆ ವೀರಶೈವ ಕುಟುಂಬಗಳಲ್ಲಿ ಪತ್ನಿಯರು ಪರಿಯೊಂದಿಗೆ ಹೀಗೆ ಬಾಳಿದರೆಂಬುದು ನಂಬಲಾಗದ ಜಾಗತಿಕ ಸತ್ಯ. ಸಾಮಾನ್ಯವಾಗಿ ಎಲ್ಲ ಶರಣ ದಂಪತಿಗಳು ಈ ಚೌಕಟ್ಟಿನಲ್ಲಿ ನಿಂತು ಗಂಡನೊಂದಿಗೆ ವಿಚಾರ ಸ್ವಾತಂತ್ರ್ಯದಿಂದ ಬಾಳಿದರು. ಅಕ್ಕಮಹಾದೇವಿ ಮಾತ್ರ, ವಿಚಾರ ಸ್ವಾತಂತ್ರ್ಯಕ್ಕೆ ಗಂಡನಿಂದ ಧಕ್ಕೆ ಬಂದಾಗ ಕೌಟುಂಬಿಕ ಚೌಕಟ್ಟನ್ನು ಮುರಿದು ಹೊರಬಂದಳು. ಗಂಡನಿಗಾಗಿ ವಿಚಾರ ಸ್ವಾತಂತ್ರ್ಯವನ್ನು ತೊರೆಯದೇ ವಿಚಾರ ಸ್ವಾತಂತ್ರ್ಯಕ್ಕಾಗಿ ಗಂಡನನ್ನೇ ತೊರೆದು ಮಿಕ್ಕ ಶರಣೆಯರಿಗಿಂತ ಪ್ರತ್ಯೇಕವಾಗಿ ಕಾಣಿಸಿಕೊಂಡಳು. ಹೀಗಾಗಿ, ಅಕ್ಕಮಹಾದೇವಿ ಹೆಸರೇ ಮಾನವ ಜೀವದ ವಿಚಾರ ಸ್ವಾತಂತ್ರ್ಯ ಮತ್ತು ವ್ಯಕ್ತಿಜೀವದ ಆತ್ಮಗೌರವಗಳಿಗೆ ಬರೆದ ವ್ಯಾಖ್ಯಾನವಾಗಿದೆ. ಅಂತಹ ಅಕ್ಕನ ಬದುಕಿನ ಹಲವು ಎತ್ತರಗಳನ್ನು ಹೊಸ ರೀತಿಯಲ್ಲಿ ಗುರುತಿಸಿದ ಪ್ರಯತ್ನವೇ ಈ ಕೃತಿ.
ಶರಣ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಹೊಸ ಹೊಳಹನ್ನು ನೀಡಿದವರು ಗಂಗಮ್ಮ ಸತ್ಯಂಪೇಟೆ. ಉಪನ್ಯಾಸಕರಾಗಿದ್ದು, 1957 ಜೂನ್ 05 ರಂದು ಹಾಸನದ ಹಂದ್ರಾಳಿನಲ್ಲಿ ಜನಿಸಿದರು. ತಂದೆ ಸಿದ್ದಪ್ಪ, ತಾಯಿ ಮಲ್ಲಮ್ಮ. ’ಅಕ್ಕಮಹಾದೇವಿತ್ವದ ಹಲವು ಎತ್ತರಗಳು, ಮಹಾಮನೆಯ ಮಹಾತಾಯಿ, ಕ್ರಾಂತಿಮಾತೆ, ಮಹಾನುಭಾವಿ ಮಾಚಿತಂದೆ, ಬಸವಣ್ಣನವರ ಕೊನೆಯ ದಿನಗಳು’ ಅವರ ಕೃತಿಗಳು. ’ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಚಿತ್ತರಗಿ ಇಳಕಲ್ ಪೀಠದಿಂದ 'ವೀರಶೈವ ಸಾಹಿತ್ಯದ ಶ್ರೇಷ್ಠ ಕೃತಿ' ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥ ಬಹುಮಾನ. 'ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ ಪ್ರಶಸ್ತಿ' ಕನ್ನಡ ಸಾಹಿತ್ಯ ಪರಿಷತ್ತು, ಬಸವ ಸಮಿತಿ ...
READ MORE