`ಶಿಕ್ಷಕ ರತ್ನ ಶಾಲಾ ಸುತ್ತ-ಮುತ್ತ’ ಕೃತಿಯು ಮೈಲಾರಪ್ಪ ಬೂದಿಹಾಳ ಅವರ ಲೇಖನಸಂಕಲನವಾಗಿದೆ. ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದ್ದು, ಮಾನವನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಅವರನ್ನು ನಾಗರೀಕರನ್ನಾಗಿಸುತ್ತದೆ. ಉತ್ತಮ ಜೀವನಕ್ಕಾಗಿ ವ್ಯಕ್ತಿಯನ್ನು ಸ್ವಾವಲಂಬಿಯಾಗಿಸಲು ಶಿಕ್ಷಣವು ತುಂಬಾ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಪ್ರಸಾರದಲ್ಲಿ ಶಿಕ್ಷಕನ ಪಾತ್ರ ಬಹಳ ಮಹತ್ವದ್ದು. ಶಿಕ್ಷಕನು ಶೈಕ್ಷಣಿಕ ಜ್ಞಾನ, ನೈತಿಕ ಮೌಲ್ಯಗಳನ್ನು ಹಂಚಿಕೊಳ್ಳುತ್ತಾನೆ ಮತ್ತು ಉತ್ತಮ ಮನುಷ್ಯರನ್ನಾಗಿ ರೂಪಿಸಲು ತನ್ನದೇ ಮೌಲ್ಯಸಹಿತ ಮಾದರಿಗಳನ್ನು ಸಂಯೋಜಿಸುತ್ತಾನೆ. ದೇವರು ಪ್ರಪಂಚದ ಸೃಷ್ಠಿಕರ್ತನಾದರೆ ಶಿಕ್ಷಕ ಇಡೀ ರಾಷ್ಟ್ರ ಸೃಷ್ಠಿಕರ್ತ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ವ್ಯಕ್ತಿ ತನ್ನ ಜ್ಞಾನ. ತಾಳ್ಮೆ ಇಂದಿನ ನವಯುಗದ ಕಾಲಘಟ್ಟದಲ್ಲಿ ನಮ್ಮ ನಡುವೆ ಅನೇಕ ಶಿಕ್ಷಕರು ಸೃಜನಶೀಲತೆಯೊಂದಿಗೆ ಮಕ್ಕಳ ಬಾಳಿನ ಮಾರ್ಗದರ್ಶಕರಾಗಿ ನೆಚ್ಚಿನ ಶಿಕ್ಷಕರಾಗಿ ಕೆಲಸ ಮಾಡುತ್ತಾ ಮಾದರಿ ಶಾಲೆಗಳನ್ನು ನಿರ್ಮಿಸಿದ್ದಾರೆ ಎಂಬುವುದನ್ನು ಇಲ್ಲಿ ದಾಖಲಿಸಿದ್ದಾರೆ.
ವೃತ್ತಿಯಲ್ಲಿ ಮಕ್ಕಳ ನೆಚ್ಚಿನ ಶಿಕ್ಷಕರು ಹಾಗೂ ಯುವಕವಿ ಮೈಲಾರಪ್ಪ ಬೂದಿಹಾಳ ಅವರು ಜನಿಸಿದ್ದು ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಹಾಗೂ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಪ್ರಸ್ತುತ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹಳೇ ಜೀರಾಳ ಕಲ್ಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಪದ ಕಲಾವಿದರೂ ಆಗಿರುವ ಮೈಲಾರಪ್ಪನವರೂ ಕನಕಗಿರಿ ಉತ್ಸವ, ಆನೆಗೊಂದಿ ಉತ್ಸವ, ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದರಾಗಿ ಭಾಗವಹಿಸಿದ್ದಾರೆ. ...
READ MORE