ಯುವ ಲೇಖಕ ದೀಕ್ಷಿತ್ ನಾಯರ್ ಅವರ ಚೊಚ್ಚಲ ಕೃತಿ ಯಶೋದೀಕ್ಷೆ.ಇದು ಲೇಖನಗಳ ಸಂಗ್ರಹ. ಯಶೋ ದೀಕ್ಷೆ ಪುಸ್ತಕವು 20 ಲೇಖನಗಳನ್ನು ಒಳಗೊಂಡಿದೆ. ಪ್ರತೀ ಲೇಖನಗಳಲ್ಲೂ ಯಶಸ್ಸಿನ ಕುರಿತಾದ ಸಂಗತಿಗಳಿವೆ. ಕಡು ಕಷ್ಟದಲ್ಲಿ ಬೆಂದು ಗೆದ್ದು ಬೀಗಿದವರ ಸಾಧನೆಯ ಸಾಹಸ ಗಾಥೆಗಳಿವೆ. ಸಣ್ಣಪುಟ್ಟ ಕೊರತೆಗಳನ್ನೇ ನೆಪವಾಗಿಸಿಕೊಂಡು ಕುಗ್ಗಿ ಹೋಗುವವರಿಗೆ ಯಶೋ ದೀಕ್ಷೆಯಲ್ಲಿನ ಲೇಖನಗಳು ಎನರ್ಜಿ ಬೂಸ್ಟ್ ನಂತಿದೆ ಎಂದರು ತಪ್ಪಾಗಲಿಕ್ಕಿಲ್ಲ. ಯಶಸ್ಸು ಸಾಧಿಸಬೇಕು ಎಂಬ ಕನಸು ಕಾಣುವವರು ಎಲ್ಲಿ ಎಡುವುತ್ತಿದ್ದಾರೆ ಎಂಬುದರ ಬಗ್ಗೆಯೂ ಉಲ್ಲೇಖಿಸಲಾಗಿದೆ: ಅದೇ ಪುಸ್ತಕದ ಪ್ಲಸ್ ಪಾಯಿಂಟ್. ಲೇಖನಗಳಲ್ಲಿನ ನಿರೂಪಣೆ ತೀರಾ ಸರಳವಾಗಿದ್ದು ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುತ್ತದೆ. ಓದನ್ನು ಪ್ರಾರಂಭಿಸಿರದವರಿಗೆ ಯಶೋ ದೀಕ್ಷೆ ಪುಸ್ತಕ ಕೈಪಿಡಿ ಅಂತಿದೆ; ಅರ್ಥಾತ್ ಮೊದಲ ಓದುಗರನ್ನು ಈ ಪುಸ್ತಕ ಸಾಹಿತ್ಯ ಲೋಕದ ಇನ್ನುಳಿದ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುತ್ತದೆ.
ದೀಕ್ಷಿತ್ ನಾಯರ್ ತಮ್ಮ ಯಶೋ ದೀಕ್ಷೆ ಎಂಬ ವಿಶಿಷ್ಟ ಕೃತಿಯಲ್ಲಿ ಯಶೋ ಸಾಧನೆಗೆ ಅಗತ್ಯವಾದ ಮೂಲ ಪಾಠಗಳನ್ನು ಸೂಕ್ತ ಮಾದರಿಗಳ ಮೂಲಕ ಹೃದಯಂಗಮವಾಗಿ ನಿರೂಪಿಸಿದ್ದಾರೆ. ಬರವಣಿಗೆ ನೇರ - ಆಪ್ತ ಮತ್ತು ಹೃದ್ಯವಾಗಿದ್ದು ಯಶೋಭಿಲಾಷೆಗಳನ್ನು ನಿಜಕ್ಕೂ ಪ್ರಚೋದಿಸಬಲ್ಲದು. ನಾವು ನಮ್ಮ ಅರಕೆಯನ್ನು ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆಯಿಂದ ಹೇಗೆ ತುಂಬಿಕೊಂಡು ಯಶೋವಂತರಾಗಬಹುದೆಂಬುದನ್ನು ಕೃತಿ ಮನದಟ್ಟು ಮಾಡಿಕೊಡುತ್ತದೆ ಎಂದು ಹಿರಿಯ ಕವಿ ಎಚ್.ಎಸ್. ವೆಂಕಟೇಶ ಮೂರ್ತಿಯವರು ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ.
ಲೇಖಕ ದೀಕ್ಷಿತ್ ನಾಯರ್ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ತಾಯಿ ರಾಧಾಮಣಿ ಮತ್ತು ತಂದೆ ಕೇಶವ ಮುರಳಿ. ಜನವರಿ 12 2001 ಜನನ. ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದ ಇವರು ಇದೀಗ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಭಾಷಣ, ಚರ್ಚೆ, ನಿರೂಪಣೆ ಮತ್ತು ಉಪನ್ಯಾಸಗಳಲ್ಲಿ ಆಸಕ್ತಿಯನ್ನು ಹೊಂದಿರುವ ದೀಕ್ಷಿತ್ ನಾಯರ್ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ನೂರಾರು ವೇದಿಕೆ ಕಾರ್ಯಕ್ರಮಗಳಲ್ಲಿ ಮಾತನಾಡಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯದಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ನಿರಂತರ ...
READ MORE