ದಾರಿ ದೀಪದ ಕಥೆಗಳು ಬೇಲೂರು ರಾಮಮೂರ್ತಿ ಅವರ ಕೃತಿಯಾಗಿದೆ.ದಾರಿ ದೀಪದ ಕಥೆಗಳು ನನ್ನ 103ನೇ ಪುಸ್ತಕ. ನೂರು ಪುಸ್ತಕಗಳ ರಚನೆಯಸಾರ್ಥಕತೆಯ ನಂತರ, ಇದೀಗ ಈ ಪುಸ್ತಕಹೊರಬರುತ್ತಿದೆ. ಇತ್ತೀಚೆಗೆ ಒಂದಿಷ್ಟು ಆಧ್ಯಾತ್ಮ ಓದು ಪ್ರಾರಂಭವಾದಾಗಿನಿಂದ, ವಿಜಯವಾಣಿಯ ಮನೋಲ್ಲಾಸ, ಬೋಧಿವೃಕ್ಷ ಪತ್ರಿಕೆ, ಮತ್ತು ವಿಶ್ವವಾಣಿಯ ಗುರು ಪುರವಣಿ ಮತ್ತಿತರ ಆಧ್ಯಾತ್ಮಿಕ ಪತ್ರಿಕೆಗಳಿಗೆ ಆಗಾಗ ಬರೆದ ಲೇಖನಗಳ ಸಂಗ್ರಹ ಇದು. ದಿನಕ್ಕೊಂದು ನುಡಿ ಮುತ್ತು ಎನ್ನುವ ಶೀರ್ಷಿಕೆಯಂತೆ ದಿನಕ್ಕೊಂದು ಲೇಖನ ಓದುಗರ ಒಳಗಣ್ಣು ತೆರೆಸುವಲ್ಲಿ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ನನ್ನದು. ಈ ಎಲ್ಲಾ ಲೇಖನಗಳನ್ನು ಪ್ರಥಮವಾಗಿ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ ಆಯಾ ಪತ್ರಿಕೆಗಳ ಸಂಪಾದಕರುಗಳಿಗೂ ಮತ್ತು ಪತ್ರಿಕೆಗಳಲ್ಲಿ ಲೇಖನ ಓದಿ ಆಗಾಗ ತಮ್ಮ ಪ್ರತಿಕ್ರಿಯೆ ತಿಳಿಸಿದ ಅನೇಕಾನೇಕ ಓದುಗರಿಗೂ ನನ್ನ ಧನ್ಯವಾದಗಳು ಎನ್ನುತ್ತಾರೆ ಲೇಖಕ .
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE