ಹಾವು-ಹಗ್ಗ: ಆಚಾರ್ಯ ಮತ್ತು ಕ್ವಾಂಟಂ ಕುಣಿಕೆ

Author : ಎನ್‌ ಶಂಕರಪ್ಪ ತೋರಣಗಲ್ಲು

Pages 440

₹ 472.00




Year of Publication: 2024
Published by: ಕಾವ್ಯಕಲಾ ಪ್ರಕಾಶನ

Synopsys

‘ಹಾವು-ಹಗ್ಗ: ಆಚಾರ್ಯ ಮತ್ತು ಕ್ವಾಟಂ ಕುಣಿಕೆ’ ಶಂಕರಪ್ಪ ತೋರಣಗಲ್ಲು ಎನ್. ಅವರ ಕೃತಿಯಾಗಿದೆ. ಇದರ ಬೆನ್ನುಡಿ ಬರಹ ಹೀಗಿವೆ; ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೊಡುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತ ಅವು ಅಪೂರ್ಣವೆಂದು ಹೀಗಳೆಯುವುದು, ವೇದಾಂತದ ಅತ ಅಧ್ಯಾತ್ಮಪರಿಪೂರ್ಣ ಎಂದು ಗುಟುರು ಹಾಕುವುದು ಮತ್ತು ವಿಜ್ಞಾನ ಹೊಸದಾಗಿ ಏನನ್ನೂ ಹೇಳುತ್ತಿಲ್ಲ, ಅದು ಹೇಳುವುದೆಲ್ಲವೂ ಈಗಾಗಲೇ ಪೌರಾತ್ಯ ಅದರಲ್ಲಿಯೂ ಭಾರತದ ಅನುಭಾವದಲ್ಲಿದೆ ಎನ್ನುವುದು ವಿಜ್ಞಾನ ನೀಡಿದ ಫಲಿತಾಂಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆತುರದಲ್ಲಿ ಹಾಕಿಕೊಂಡಿರುವ, ಪರಿಶೀಲಿಸಲಾಗದ ಊಹೆಯನ್ನೇ ಉಸಿರಾಗಿಸಿಕೊಂಡು ಕಟ್ಟಿದ ಹುಸಿ ವಿಜ್ಞಾನದ ಹೊಸ ವಾದಗಳು. ಧಾರ್ಮಿಕ ಮತ್ತು ತಾತ್ವಿಕ ಶ್ರೇಷ್ಠತೆಯ ವ್ಯಸನಗಳೇ ಇದಕ್ಕೆ ಅಡಿಪಾಯಗಳು. Am ವಿಜ್ಞಾನ ಮತ್ತು ಅನುಭಾವಿಕ ಭಾವನಾವಾದಿ ವೇದಾಂತಿಗಳ ಅತ, ಬೌದ್ಧರ ಶೂನ್ಯವಾದ, ವಿಜ್ಞಾನವಾದ, ಚೀನಿಯರ ತಾವೊ ಇವುಗಳ ನಡುವೆ ಏನಾದರೂ ಹೋಲಿಕೆಗಳಿವೆಯೇ, ಆಧ್ಯಾತ್ಮಿಕ ಅನುಭಾವವಾದಿಗಳು ಹೇಳುವಂತೆ ವಿಜ್ಞಾನದ ಅಪೂರ್ಣತೆಯನ್ನು ಪೌರಾತ್ಯ ಅಧ್ಯಾತ್ಮ ತುಂಬಬಲ್ಲದೇ ಎನ್ನುವ ಚರ್ಚೆ ಈ ಪುಸ್ತಕದಲ್ಲಿದೆ. ಹಾವು-ಹಗ್ಗ, ಈ ವಿಶ್ವ ಭ್ರಮೆಯೇ ಹೊರತು ನಿಜವಲ್ಲ ಎನ್ನುವ ಅದೈತದ ಮಾಯಾ ತತ್ತ್ವವನ್ನು, ಆಚಾರ್ಯ ಅದರ ಪ್ರತಿಪಾದಕರನ್ನು, ಕ್ವಾಂಟಂ ಕುಣಿಕೆ ವಿಜ್ಞಾನ ಮತ್ತು ಅನುಭಾವಗಳ ನಡುವಿನ ಕಂದಕವನ್ನು ಮತ್ತು ವಿಜ್ಞಾನ ಈಗ ಏನನ್ನು ಹೇಳುತ್ತಿದೆ, ಮುಂದೆ ಯಾವ ದಿಕ್ಕಿನಲ್ಲಿ ಸಾಗಿ ಅನುಭಾವಿಕ ಅಧ್ಯಾತ್ಮದ ಊಹೆಗಳಿಗೆ, ಹೋಲಿಕೆಗಳಿಗೆ ಹೇಗೆ ನೇಣು ಕುಣಿಕೆ ಆಗಬಹುದೆನ್ನುವುದನ್ನು ಸೂಚಿಸುತ್ತದೆ.

About the Author

ಎನ್‌ ಶಂಕರಪ್ಪ ತೋರಣಗಲ್ಲು

ಲೇಖಕ ಎನ್‌ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್‌ ಆಗಿದ್ದಾರೆ.  ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ),  ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ...

READ MORE

Related Books