‘ಮಾಸದ ದಾಸವಾಣಿ’ ಯತಿರಾಜ್ ವೀರಾಂಬುಧಿ ಅವರ ಲೇಖನ ಸಂಕಲನ. ದಾಸರ ಪದಗಳೆಂದರೆ, ಸುಲಿದ ಬಾಳೆಯ ಹಣ್ಣಿನಂದದಿ ಎಂಬ ಉಪಮೆ. ಸುಲಭವಾದ, ಸರಳವಾದ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಅದು ಪುರಂದರದಾಸರದಿರಲಿ, ಕನಕದಾಸರದಿರಲಿ ಜಗನ್ನಾಥದಾಸರು, ವಿಜಯದಾಸರದಿರಲಿ, ಎಲ್ಲವೂ ಮನಸ್ಸಿಗೆ ಹಿಡಿಸುವಂತಹ ಕೀರ್ತನೆಗಳು. ಇವು ಪದಗಳೂ ಹೌದು. ಈ ಕೃತಿಯಲ್ಲಿ ದಾಸರ ಪದಗಳು, ದೇವರನಾಮಗಳ ಕುರಿತಾಗಿ ಬರೆದಿರುವ ವಿಭಿನ್ನ ಲೇಖನಗಳು ಸಂಕಲನಗೊಂಡಿವೆ.
ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು- ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...
READ MORE