‘ಮಣ್ಣಿನ ಕಣ್ಣು’ ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಅವರ ಲೇಖನ ಸಂಕಲನ. ಕನ್ನಡ ಪತ್ರಿಕೆಗಳ ಓದುಗರಿಗೆಲ್ಲಾ ಆರ್. ಪೂರ್ಣಿಮಾ ಹೆಸರು ಹೊಸದೇನಲ್ಲ. ‘ಪ್ರಜಾವಾಣಿ’, ‘ಸುಧಾ’, ‘ಮಯೂರ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅವರು ಜನಪರ ಲೇಖನಗಳನ್ನು ಬರೆಯಲು ಹೊಸ ವಿಷಯಗಳನ್ನು ಅರಸುತ್ತ ಇದ್ದ ಹಾಗೆ, ರಾಷ್ಟ್ರಮಟ್ಟದ ‘ಈವ್ಸ್ ವೀಕ್ಲಿ’ ಪ್ರಶಸ್ತಿ ಸೇರಿ ಕನ್ನಡ ಪತ್ರಿಕಾ ರಂಗದ ಪ್ರಮುಖ ಪ್ರಶಸ್ತಿಗಳೆಲ್ಲ ಅವರನ್ನು ಅರಸುತ್ತ ಬಂದವು. ಆಮೇಲೆ ತರಂಗ, ತುಷಾರ, ಉದಯವಾಣಿ, ಬಳಗ ಸೇರಿದ ಅವರು ಉದಯವಾಣಿಯ ಬೆಂಗಳೂರು ಆವೃತ್ತಿಯ ಸಂಪಾದಕಿಯಾದರು. ಅಷ್ಟೆತ್ತರಕ್ಕೆ ಏರಿದ ಕನ್ನಡದ ಮೊದಲ ಪತ್ರಕರ್ತೆ ಅನ್ನಿಸಿಕೊಂಡರು.
ಪತ್ರಿಕಾರಂಗದಲ್ಲಿ ಕೆಲಸ ಮಾಡುತ್ತಲೆ ಹೊಸಗನ್ನಡ ಕಾವ್ಯದ ಮೇಲೆ ಸಂಪ್ರಬಂಧ ಬರೆಡು ಡಾಕ್ಟರೇಟ್ ಪಡೆದರು. ಅವರ ಪತ್ರಿಕಾ ವೃತ್ತಿ-ಪ್ರವೃತ್ತಿಗಳಿಗೆ ನಿವೃತ್ತಿಯ ಹಂಗಿಲ್ಲವೇನೋ. ಪ್ರಜಾವಾಣಿಯ ಸಿಬ್ಬಂದಿ ತರಬೇತಿಯ ಅಭಿಯೋಜನೆ ಮತ್ತು ಮಯೂರದ ಸಂಪಾದಕೀಯ ನಿರ್ವಹಣೆಗಳ ನಡುವೆ ಅವರ ಸಮಾಜಮುಖಿ ಕೆಲಸಗಳು ಸಾಗುತ್ತಿವೆ. ಇವೆಲ್ಲದರಿಂದಾಗಿ ಅವರು ಪತ್ರಿಕಾರಂಗದಲ್ಲಿ ತಾರಾಮೌಲ್ಯಗಳಿಸಿಕೊಂಡವರು ಎನ್ನುತ್ತಾರೆ ಹಿರಿಯ ಅಂಕರಣಕಾರ ನಾಗೇಶ್ ಹೆಗಡೆ.
ಡಾ ಆರ್. ಪೂರ್ಣಿಮಾ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ 35 ವರ್ಷಗಳಿಂದ ಕ್ರಿಯಾಶೀಲವಾಗಿರುವ ಪ್ರತಿಭಾವಂತ ಪತ್ರಕರ್ತೆ ಮತ್ತು ಅಂಕಣಗಾರ್ತಿ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಮತ್ತು ಸುವರ್ಣ ಪದಕಗಳ ಮನ್ನಣೆ ಗಳಿಸಿದವರು. ಜನಪರ ಚಳವಳಿಗಳ ಸಾಂಗತ್ಯದಲ್ಲಿ ರೂಪುಗೊಂಡ ವ್ಯಕ್ತಿತ್ವ.ಉದಯವಾಣಿ ಬೆಂಗಳೂರು ಆವೃತ್ತಿಯ ಸಂಪಾದಕ ಸ್ಥಾನದ ಜವಬ್ದಾರಿ ನಿರ್ವಹಿಸಿದ ಪ್ರಥಮ ಮಹಿಳೆ ಎಂಬ ದಾಖಲೆಯನ್ನು ಪಡೆದುಕೊಂಡವರು. ವಿವಿಧ ಕ್ಷೇತ್ರಗಳನ್ನು ಕುರಿತು ಬರೆಯಬಲ್ಲ ಅಧ್ಯಯನಶೀಲ, ವಿಶ್ಲೇಷಣಾತ್ಮಕ ಪ್ರವೃತ್ತಿ, ಪತ್ರಿಕೋದ್ಯಮದ ಸಾಧನೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ಲಭಿಸಿವೆ. ಪೂರ್ಣಿಮಾ ಆರ್. ಅವರು ಲೇಖಕಿಯಾಗಿಯೂ ಜನಪ್ರಿಯ. ಸ್ನೇಹಸೇತು, ಚಿತ್ತಗಾಂಗ್ ...
READ MORE