ಸ್ವಾತಂತ್ಯ್ರಪೂರ್ವದ ಹೋರಾಟಗಳ ಸ್ಪಷ್ಟ ಮಾಹಿತಿ ದೊರಕಿಸಿಕೊಡಬೇಕು ಮತ್ತು ಸ್ವಾತಂತ್ಯ್ರ ಸೇನಾನಿಗಳು ಹಂತಹಂತವಾಗಿ ಐಕ್ಯತೆಯಿಂದ ಹೇಗೆ ಹೋರಾಡುತ್ತಿದ್ದರು ಎಂಬುದರ ಸ್ಪಷ್ಟ ಅರಿವು ಮೂಡಿಸುವ ಉದ್ದೇಶದೊಂದಿಗೆ ಬುರ್ಲಿ ಬಿಂದು ಮಾಧವ ಆಚಾರ್ಯರು ಬರೆದ ಕೃತಿ-ಭಾರತೀಯ ಸ್ವಾತಂತ್ಯ್ರದ ಹೆಜ್ಜೆಗಳು.
ಸಾಹಿತಿ ನಾ.ಸು.ಹರ್ಡೀಕರ್ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಯಾವುದೇ ದೇಶವು ತಾನು ಕಳೆದುಕೊಂಡ ಸ್ವಾತಂತ್ಯ್ರವನ್ನು ಮರಳಿ ಪಡೆಯಲು ಆ ದೇಶದ ನಾಯಕರು ಮೊದಲು ಜನರನ್ನು ಬಡಿದೆಬ್ಬಿಸಬೇಕು. ಅವರನ್ನು ಹೋರಾಟಕ್ಕೆ ಹುರಿಗೊಳಿಸಬೇಕು. ನಮ್ಮ ದೇಶದಲ್ಲಿ ಅಂತಹ ನಾಯಕರು ಯಾರು? ಅವರಿಂದ ಪ್ರಭಾವಿತರಾಗಿ ಜನರು ಹೇಗೆ ಹೋರಾಟದಲ್ಲಿ ಪಾಲ್ಗೊಂಡರು. ಇಂತಹ ಗಂಭೀರ ವಿಷಯಗಳತ್ತ ಇಲ್ಲಿಯ ಲೇಖನಗಳು ಸ್ಪಷ್ಟಪಡಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ. 1857 ರಿಂದ ಎದ್ದ ಬಂಡಾಯದಿಂದ ಹಿಡಿದು ಸಾಗಿದ ಸ್ವಾತಂತ್ಯ್ರದ ಹೆಜ್ಜೆಗಳು, ನಮ್ಮ ಮುಂದಣ ಹೋರಾಟ, ಮಹರ್ಷಿ ದಾದಾಭಾಯಿ ನವರೋಜಿ, ಮಹಾತ್ಮ ಗಾಂಧೀಜಿ ಹಾಗೂ ಜವಾಹರಲಾಲ್ ನೆಹರೂ ಹೀಗೆ ವಿವಿಧ ಅಧ್ಯಾಯಗಳಡಿ ವಿಷಯವನ್ನು ನಿರೂಪಿಸಲಾಗಿದೆ.
ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು. ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...
READ MORE