ಲೇಖಕಿ ರೂಪ ಹಾಸನ ಅವರ ಸಂಪಾದಿತ ಕೃತಿ-‘ತಾಯ್ನುಡಿಯ ಸಂಕಟಕ್ಕೆ ದನಿಯಾಗಿ’. 32 ಲೇಖಕರು ಕನ್ನಡ ಭಾಷಾಮಾಧ್ಯಮ ಬಿಕ್ಕಟ್ಟು ಕುರಿತಂತೆ ವ್ಯಕ್ತಪಡಿಸಿದ ಲೇಖನ ರೂಪದ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಿಭಿನ್ನ ಆಯಾಮಗಳಲ್ಲಿ ಸಮಸ್ಯೆಯನ್ನು ವಿಶ್ಲೇಷಿಸಿ, ಪರಿಹಾರಾತ್ಮಕ ನೆಲೆಗಳನ್ನು ಹುಡುಕುವ ಯತ್ನ ಇವುಗಳ ಆಶಯವಾಗಿದೆ. ಕನ್ನಡದ ಅಳಿವು-ಉಳಿವಿನ ಪ್ರಶ್ನೆಯಾಗುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಬಹುತೇಕ ಲೇಖನಗಳು ಸೂಕ್ತ ಉತ್ತರಗಳಾಗಿ ಮೂಡಿಬಂದಿವೆ. ಮಾತೃಭಾಷೆ ಕಡ್ಡಾಯ ಎಂಬ ಪರಿಕಲ್ಪನೆಗೆ ವಿವಿಧ ವಾದಗಳು-ವಿವಾದಗಳು ಸೃಷ್ಟಿಯಾಗಿದ್ದು, ಅವುಗಳಿಗೆ ಸೂಕ್ತ ಪರಿಹಾರದ ಹೊಳವು ನೀಡಲಿವೆ.
ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ) , ಕಡಲಿಗೆಷ್ಟೊಂದು ಬಾಗಿಲು, ಲಹರಿ , ಮಹಿಳೆ ಮತ್ತುಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ...
READ MORE