“ಕಣ್ಣು ಕಂಡ ಕ್ಷಣಗಳು” ಗೋಪಾಲಕೃಷ್ಣ ಪೈ ಅವರ ಸಂಪಾದಕತ್ವದ ಪಿ.ಶೇಷಾದ್ರಿ ಅವರ ಒಡನಾಟದ ನೆನಪುಗಳ ಹೂರಣವಾಗಿದೆ. ಶ್ರೀ. ಪಿ. ಶೇಷಾದ್ರಿಯವರ ಸಾಧನೆಗಳ ಬಗ್ಗೆ ಒಂದು ದಾಖಲೀಕರಣವಾಗಬೇಕು ಎಂದು ಹಿರಿಯ ನಟ ಶ್ರೀ ದತ್ತಣ್ಣ ಮಾಡಿದ ಪ್ರಸ್ತಾಪದ ಫಲ ಈ ಕೃತಿ ಇಲ್ಲಿಯ ತನಕ 12 ಸಿನಿಮಾಗಳನ್ನು ಮಾಡಿ ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಚಿತ್ರೋತ್ಸವಗಳಲ್ಲಿ ಹಲವು ಬಾರಿ ನಾಮನಿರ್ದೇಶನಗೊಂಡಿರುವ ಶೇಷಾದ್ರಿಯವರ ಸಾಧನೆಗಳ ಬಗ್ಗೆ ವಿವರಾಣಾತ್ಮಕವಾಗಿ ವಿವರಿಸಿರುವ ಪುಸ್ತಕ ಇದಾಗಿದೆ. ಈ ಕೃತಿಯಲ್ಲಿ ಪಿ. ಶೇಷಾದ್ರಿ ಅವರ ಒಡನಾಟಕ್ಕೆ ಬಂದ ಅನೇಕರ ವೈಯಕ್ತಿಕ ಉಲ್ಲೇಖಗಳೂ, ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಕ್ರಿಯೆಗಳಿವೆ.
ಅಷ್ಟೇ ಅಲ್ಲದೆ ಸಿನಿಮಾ ತಯಾರಿಕೆಯಲ್ಲಿ ನಿರ್ದೇಶಕನ ಸಾರಥ್ಯವಿದ್ದರೂ ಒಂದು ಸಮಷ್ಠಿ ಕ್ರಿಯೆಯಲ್ಲಿ ನಡೆಯುವ ಚಟುವಟಿಕೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತನ್ನ ಮನಸ್ಸಿನ ಪಾತಳಿಯಲ್ಲಿ ಹುಟ್ಟಿದ ಕಲ್ಪನೆಯನ್ನು ಸಾಕಾರಗೊಳಿಸಲು ಆ ನಿರ್ದೇಶಕ ಹಲವಾರು ಜನರ ಬೌದ್ಧಿಕ ವಿಸ್ತಾರವನ್ನು ಬಳಸಿಕೊಂಡು ಅಂತ್ಯರೂಪ ಕೊಡುತ್ತಾನೆ. ಹಾಗೆ ಪಾಲುಗೊಳ್ಳುವ ಮಂದಿ ತಮ್ಮ ಪ್ರತಿಭೆಯನ್ನು ಉಪಯೋಗಿಸುತ್ತಲೇ ತಮ್ಮ ಮುಖಂಡನಾದ ನಿರ್ದೇಶಕನ ಬಗ್ಗೆ ತಮ್ಮದೇ ಆದ ನಿಲುವು ಹೊಂದಿರುತ್ತಾರೆ ಎಂಬ ವಿಚಾರಗಳನ್ನು ಇಲ್ಲಿ ವಿವರಿಸಲಾಗಿದೆ.
ಈ ಪುಸ್ತಕದಲ್ಲಿ ಒಡನಾಟ, ಟೆಲಿಫಿಲ್ಮ್ ಮತ್ತು ಸಾಕ್ಷ್ಯಾಚಿತ್ರ, ‘ಕತೆಗಾರ‘ ಧಾರಾವಾಹಿ ಸರಣಿ ಎಂಬ 3 ಭಾಗಗಳಿವೆ. .
ಈ ಕೃತಿಯಲ್ಲಿ ಶ್ರೀ ಶೇಷಾದ್ರಿಯವರು ರಚಿಸಿದ ಕಿರುಚಿತ್ರ ಮಾಸ್ತಿಯವರ 'ಸುಬ್ಬಣ್ಣ' ಬಗ್ಗೆ ಕನ್ನಡದ ಖ್ಯಾತ ವಿಮರ್ಶಕರಾದ ಶ್ರೀ ಟಿ.ಪಿ. ಅಶೋಕ ಅವರೂ ಹಾಗೂ ಶ್ರೀ ಬೊಳುವಾರು ಬರೆದ 'ಒಂದು ತುಂಡು ಗೋಡೆ' ಕಥೆಯ ಆಧರಿಸಿದ ಸಿನಿಮಾಗಳ ಬಗ್ಗೆ ಅಪೂರ್ವ ಒಳನೋಟಗಳಿರುವ ಶ್ರೀ. ಮನು ಚಕ್ರವರ್ತಿಯವರೂ ಬರೆದಿದ್ದಾರೆ. ಅಲ್ಲದೇ 'ದೇವಕಾರು' ಎಂಬ ಸಾಕ್ಷ್ಯಚಿತ್ರದ ಬಗ್ಗೆ ಶ್ರೀ ಮನು ಚಕ್ರವರ್ತಿಯವರೂ, ಸಾಹಿತಿ ಶ್ರೀ ಸತೀಶ್ ಚಪ್ಪರಿಕೆಯವರೂ ಬೇರೆ ಬೇರೆ ಲೇಖನಗಳನ್ನು ಬರೆದಿದ್ದಾರೆ. ಇವಲ್ಲದೇ ಶ್ರೀ ಶೇಷಾದ್ರಿಯವರು ಕೆಲವು ಕಿರುಚಿತ್ರಗಳನ್ನೂ ಸಾಕ್ಷ್ಯಚಿತ್ರಗಳನ್ನೂ ರಚಿಸಿದ್ದಾರೆ. ಅವರ ಜೊತೆ ಕೆಲವದರಲ್ಲಿ ಕೆಲಸ ಮಾಡಿದ ಛಾಯಾಗ್ರಾಹಕ ಶ್ರೀ ಬಿ.ಎಸ್. ವಿಶ್ವನಾಥ್ ಬರೆದ ಶೇಷಾದ್ರಿಯ ಕೆಲಸದ ವೈಖರಿಯ ಬಗ್ಗೆ ದೀರ್ಘವಾದ ಒಂದು ಲೇಖನವೂ ಇದೆ.
ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...
READ MORE