ಅರಿವಿನಂಗಳ

Author : ನಜುಂಡಸ್ವಾಮಿ ತೊಟ್ಟವಾಡಿ

Pages 284

₹ 150.00




Year of Publication: 2011
Published by: ನಾಗಚೇತನ ಸಂಸ್ಕೃತಿ ಟ್ರಸ್ಟ್
Address: #206, ಸ್ವಿಸ್ ಕಾಂಪ್ಲೆಕ್ಸ್, ರೇಸ್ ಕೋರ್ಸ್ ರಸ್ತೆ, ಬೆಂಗಳೂರು 560 001

Synopsys

`ಅರಿವಿನಂಗಳ' ಕೃತಿಯು ನಜುಂಡಸ್ವಾಮಿ ತೊಟ್ಟವಾಡಿ ಅವರ ನಾಟಕಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಅಸ್ಪ್ರಶ್ಯತಾ ನಿವಾರಣೆಯ ಪ್ರಬಲ ಗುರಿಯನ್ನಿರಿಸಿಕೊಂಡ ಹಲವು ನಾಟಕಗಳು ಇಲ್ಲಿವೆ. ಕೆಲವು ಪ್ರಸಿದ್ಧ ಬೀದಿ ನಾಟಕಗಳಾಗಿದ್ದು ಶೋಷಿತ ಸಮುದಾಯ ಎಚ್ಚರಗೊಂಡು ಶೋಷಣೆಯ ವಿರುದ್ಧ ದನಿಯೆತ್ತಿರುವ ಪ್ರತಿಭಟನೆಯ ಪ್ರಬಲ ಅಸ್ತ್ರಗಳು. ಇವು ಆರಂಭಗೊಂಡು ನಾಲ್ಕು ದಶಕಗಳೇ ಸಂದಿವೆ. ಅ೦ದಿನ ಪ್ರಗತಿಪರ ನಾಟಕಕಾರರೂ 5 ಇಂತಹ ನಾಟಕಗಳನ್ನು ಬರೆದು ನಗರದ ಬೀದಿ ಬೀದಿಗಳಲ್ಲಿ ಪ್ರದರ್ಶಿಸಿ ಸಮಾಜದ ಒರೆಕೋರೆಗಳನ್ನು, ವಿಕೃತ ಮನಸ್ಸುಗಳನ್ನು ತೆರೆದಿರಿಸಿದ್ದರು. ಇಂತಹ ನಾಟಕಗಳಿಗೆ ವೇಷ ಭೂಷಣ, ಢಾಳಾದ ದೀಪ ಮುಂತಾದವು ಏನೂ ಬೇಕಿಲ್ಲ. ಜರೂ-ನಟಿಯರೂ ವಿಷಯವನ್ನು ಪ್ರಸ್ತುತಪಡಿಸುತ್ತ ಸಹಜವಾಗಿ ಅಭಿನಯಿಸಿ ತನಿರ್ವಹಣೆ ಮಾಡುವುದಷ್ಟೇ. ಇಂಥ ನಾಟಕ ಪ್ರಕಾರವೊಂದು ಇಲೆಕ್ಟ್ರಾನಿಕ್ ಮಾಧ್ಯಮಗಳ ಮುಂದೆ ಸ್ಪರ್ಧಿಸಲಾಗದೆ ನೇಪಥ್ಯಕ್ಕೆ ಸರಿಯಿತು. ಇತ್ತೀಚೆಗೆ ರಂಗಚೇತನ • ಮೂಲಕ ಬೀದಿನಾಟಕಗಳ ಸಪ್ತಾಹ ಕರ್ನಾಟಕದಾದ್ಯಂತ ನಡೆದಿದ್ದು ಅಲ್ಲಿ ಪ್ರದರ್ಶನಕ್ಕಾಗಿ ಬಲೆಸಿರುವ ನಾಟಕಗಳ ಸಂಕಲನವಿದು.

About the Author

ನಜುಂಡಸ್ವಾಮಿ ತೊಟ್ಟವಾಡಿ

ನಜುಂಡಸ್ವಾಮಿ ತೊಟ್ಟವಾಡಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಒಲವನ್ನು ಹೊಂದಿದ್ದಾರೆ. ಕೃತಿಗಳು: ಅರಿವಿನಂಗಳ ...

READ MORE

Reviews

(ಹೊಸತು, ಮೇ 2012, ಪುಸ್ತಕದ ಪರಿಚಯ)

ಅಸ್ಪ್ರಶ್ಯತಾ ನಿವಾರಣೆಯ ಪ್ರಬಲ ಗುರಿಯನ್ನಿರಿಸಿಕೊಂಡ ಹಲವು ನಾಟಕಗಳು ಇಲ್ಲಿವೆ. ಕೆಲವು ಪ್ರಸಿದ್ಧ ಬೀದಿ ನಾಟಕಗಳಾಗಿದ್ದು ಶೋಷಿತ ಸಮುದಾಯ ಎಚ್ಚರಗೊಂಡು ಶೋಷಣೆಯ ವಿರುದ್ಧ ದನಿಯೆತ್ತಿರುವ ಪ್ರತಿಭಟನೆಯ ಪ್ರಬಲ ಅಸ್ತ್ರಗಳು. ಇವು ಆರಂಭಗೊಂಡು ನಾಲ್ಕು ದಶಕಗಳೇ ಸಂದಿವೆ. ಅ೦ದಿನ ಪ್ರಗತಿಪರ ನಾಟಕಕಾರರೂ 5 ಇಂತಹ ನಾಟಕಗಳನ್ನು ಬರೆದು ನಗರದ ಬೀದಿ ಬೀದಿಗಳಲ್ಲಿ ಪ್ರದರ್ಶಿಸಿ ಸಮಾಜದ ಒರೆಕೋರೆಗಳನ್ನು, ವಿಕೃತ ಮನಸ್ಸುಗಳನ್ನು ತೆರೆದಿರಿಸಿದ್ದರು. ಇಂತಹ ನಾಟಕಗಳಿಗೆ ವೇಷ ಭೂಷಣ, ಢಾಳಾದ ದೀಪ ಮುಂತಾದವು ಏನೂ ಬೇಕಿಲ್ಲ. ಜರೂ-ನಟಿಯರೂ ವಿಷಯವನ್ನು ಪ್ರಸ್ತುತಪಡಿಸುತ್ತ ಸಹಜವಾಗಿ ಅಭಿನಯಿಸಿ ತನಿರ್ವಹಣೆ ಮಾಡುವುದಷ್ಟೇ. ಇಂಥ ನಾಟಕ ಪ್ರಕಾರವೊಂದು ಇಲೆಕ್ಟ್ರಾನಿಕ್ ಮಾಧ್ಯಮಗಳ ಮುಂದೆ ಸ್ಪರ್ಧಿಸಲಾಗದೆ ನೇಪಥ್ಯಕ್ಕೆ ಸರಿಯಿತು. ಇತ್ತೀಚೆಗೆ ರಂಗಚೇತನ • ಮೂಲಕ ಬೀದಿನಾಟಕಗಳ ಸಪ್ತಾಹ ಕರ್ನಾಟಕದಾದ್ಯಂತ ನಡೆದಿದ್ದು ಅಲ್ಲಿ ಪ್ರದರ್ಶನಕ್ಕಾಗಿ ಬಲೆಸಿರುವ ನಾಟಕಗಳ ಸಂಕಲನವಿದು. ಸಮಾಜವೇಕೆ ಹೀಗಿದೆ ? ತಾರತಮ್ಯಗಳೇಕೆ, ದುರ್ಬಲರನ್ನೇಕೆ ತುಳಿಯುತ್ತಿದ್ದಾರೆ, ಎಲ್ಲರಿಗೂ ಬದುಕುವ ಹಕ್ಕಿಲ್ಲವೆ, ಗುಣಕ್ಕಿಂತ ಹಣಕ್ಕೇ ಪ್ರಾಮುಖ್ಯತೆ - ಮುಂತಾದ ಪ್ರಶ್ನೆಗಳನ್ನು ಮುಂದಿರಿಸಿಕೊಂಡು ಇವು ರಚಿತವಾಗಿವೆ. ಇವನ್ನು ಬೀದಿಗಳಲ್ಲಿ ಪ್ರದರ್ಶಿಸಬೇಕೆಂದೇನೂ ಇಲ್ಲ. ಓದಿಯೂ ಅರ್ಥೈಸಬಹುದು; ರಂಗಕ್ಕೂ ಅಳವಡಿಸ ಬಹುದು. ಮಾಧ್ಯಮ ಯಾವುದಾದರೇನು – ಜನಜಾಗೃತಿ ಮುಖ್ಯ.. ಧರ್ಮನಿರಪೇಕ್ಷ, ಜಾತ್ಯತೀತ ಸಮಾಜ ನಿರ್ಮಾಣ ಮುಖ್ಯ.

-

Related Books