‘ನೆಲದ ಮಾತು ಬೇರೆ’ ಸತ್ಯಮಂಗಲ ಮಹಾದೇವ ಅವರ ಜೀವ ಸರಪಳಿಯ ಸಾಹಿತ್ಯ ಕಥನವಾಗಿದೆ. ಸಾಹಿತ್ಯದಲ್ಲಿ ಅಡಗಿರುವ ಹಿತ ಜೀವಕಾರುಣ್ಯವೇ ಆಗಿದೆ. ಈ ಜೀವಕಾರುಣ್ಯ ಕಥನ, 'ಸಂಶೋಧನೆ' ಮತ್ತು 'ಸಮಾಲೋಚನೆ' ಎನ್ನುವ ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿದೆ. ಮೊದಲ ಭಾಗದಲ್ಲಿನ ಹದಿಮೂರರಲ್ಲಿ ಎಂಟು ಲೇಖನಗಳು 'ಅನುಭಾವ'ದ ನೆಲೆಯನ್ನು ವಿವಿಧ ನೆಲೆಗಳಲ್ಲಿ ನಿರ್ವಚಿಸುವ ಪ್ರಯತ್ನಗಳಾಗಿವೆ. ಅನುಭವದ ನಿರ್ವಚನ, ಅನುಭಾವಿಯ ಲಕ್ಷಣಗಳು, ವಚನಕಾರರಲ್ಲಿ ಅನುಭಾವ, ಭಕ್ತಿಪ್ರಧಾನ ಕವಿಗಳ ಕಾವ್ಯದಲ್ಲಿ ಅನುಭಾವ, ತತ್ವಪದಕಾರರು, ಭಾರತೀಯ ಅಧ್ಯಾತ್ಮ ಚಿಂತಕರಲ್ಲಿ ಅನುಭಾವ, ಸೂಫಿಗಳಲ್ಲಿ ಹಾಗೂ ಆಂಗ್ಲ ಮೆಟಫಿಸಿಕಲ್ ಕವಿಗಳಲ್ಲಿ ಅನುಭಾವ ಹೀಗೆ, ವಿವಿಧ ನೆಲೆಗಳಲ್ಲಿ ಅನುಭಾವದ ಸ್ವರೂಪವನ್ನು ನಿರ್ವಚಿಸುವ ಪ್ರಯತ್ನವನ್ನು ಮಹಾದೇವ ಅವರು ಮಾಡಿದ್ದಾರೆ.
ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು. ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ, ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು. ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...
READ MORE