ಲೇಖಕ ಸಂತೋಷ್ ಕುಮಾರ್ ಮೆಹೆಂದಳೆ ಅವರು ಬರೆದ ಲೇಖನ ಕೃತಿ ʻದಿ ಅನ್‌ಟೋಲ್ಡ್ ಸೋರಿ ಆಫ್ ಕಾಶ್ಮೀರ್ʼ. ವಿಶ್ವವಾಣಿಯ ಪ್ರಧಾನ ಸಂಪಾದಕರಾಗಿರುವ ವಿಶ್ವೇಶ್ವರ ಭಟ್ ಅವರು ಪುಸ್ತಕದ ಬೆನ್ನುಡಿಯಲ್ಲಿ, "ಕಶ್ಮೀರದ ಬಗ್ಗೆ ಇದೊಂದು ವಿಶಿಷ್ಟ ಕೃತಿ. ದಿ ಅನ್ ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ್ ಕೃತಿ ಈ ತನಕ ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಬಯಲು ಮಾಡಿದೆ. ಕಶ್ಮೀರ ಭಾರತದ ಪಾಲಿಗೆ ಸ್ವರ್ಗ ಸದೃಢ ನಾಡಾಗಬೇಕಿತ್ತು. ದುರದೃಷ್ಟವಶಾತ್ ಅದು ತಾಪಗ್ರಸ್ಥ ಭೂಮಿಯಾಗಿ ಪರಿಣಮಿಸಿದೆ. ಆಯಾ ಕಾಲದಲ್ಲಿ ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ಅನಿವೇದ ನಿರ್ಧಾರಗಳಿಂದ, ಇಂದಿಗೂ ನಾವು ಬೆಲೆ ತೆರುತ್ತಲೇ ಇದ್ದೇವೆ. ಭಾರತದಲ್ಲಿ ಹಿಂದೂಗಳು ಪರಕೀಯರಂತೆ ಎರಡನೇ ದರ್ಜೆ ಪ್ರಜೆಗಳಂತೆ, ಅಸಹನೀಯವಾದ ಮತ್ತು ದುಸ್ತರ ಬದುಕನ್ನು ಬಾಳುತ್ತಿರುವುದು ದುರಂತ. ದಿಲ್ಲಿ ಮತ್ತು ಕಶ್ಮೀರದ ನಾಯಕರ ಸಂಕುಚಿತ ಮತ್ತು ಮತೀಯ ಭಾವನೆಗಳಿಂದ ಕಾಶ್ಮೀರ ನಮ್ಮ ಕೈತಪ್ಪಿ ಹೋಗುವಂತ ಪರಿಸ್ಥಿತಿಯ ನಿರ್ಮಾಣವಾಗಿತ್ತು. ಕಣಿವೆಯಲ್ಲಿ ನಿರಂತರ ಅಶಾಂತಿ ನೆಲೆಸಲು ಪ್ರತ್ಯೇಕವಾದಿಗಳು ಆಡಿದ ಆಟ ಒಂದೆರಡಲ್ಲ. ಈ ಎಲ್ಲಾ ವಿಷಯಗಳನ್ನು ಮಹೆಂದಳೆ ಅವರು ಈ ಕೃತಿಯಲ್ಲಿ ಐತಿಹಾಸಿಕ ಹಿನ್ನೆಲೆಯಿಂದ ವಿಶ್ಲೇಷಣಾತ್ಮಕ ನೋಟದಿಂದ ಚಿಕಿತ್ಸಕ ಬುದ್ದಿಯಿಂದ ಪರಿಣಾಮಕಾರಿಯಾಗಿನಮ್ಮ ಮುಂದೆ ಇಟ್ಟಿದ್ದಾರೆ. ಯಾರಿಗೂ ಗೊತ್ತಾಗದೇ, ಅಲ್ಲಲ್ಲಿಯೇ ಹುದುಗಿಹೋದ, ಕಾಲಗರ್ಭ ಸೇರಬಹುದಾದ ಅನೇಕ ಭಯಾನಕ, ಐತಿಹಾಸಿಕ ʻಕಳೇಬರʼಗಳನ್ನು ಅವರು ಬಹಿರಂಗಗೊಳಿಸಿದ್ದಾರೆ. ಕಾಶ್ಮೀರದ ಬಗ್ಗೆ ಇದೊಂದು ವಿಶಿಷ್ಟ ಕೃತಿ" ಎಂದು ಹೇಳಿದ್ದಾರೆ.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MORE