ಬರೆಹದ ಬಗೆಗೆ ಬಲ್ಲವರ ಬರೆಹಗಳ ಸಂಗ್ರಹವೇ ’ಹೂಬಾಣ’. ಈ ಕೃತಿಯ ಬಗ್ಗೆ ಲೇಖಕರು ಬರೆಯುತ್ತಾ, ’ಕೃತಿ ರಚನೆ ಒಂದು ಅಸಾಧಾರಣ ಸಾಧನೆ. ಕೃತಿಯೊಂದನ್ನು ರಸಮಯವಾಗಿ ರೂಪಗೊಳಿಸುವುದು ಇನ್ನಷ್ಟು ಪ್ರತಿಭೆ -ಪರಿಣಿತಿಯನ್ನು ಆಪೇಕ್ಷಿಸುತ್ತದೆ. ಕೃತಿಯು ಈ ಕುರಿತಾದ ಬರಹಗಳನ್ನು ಒಳಗೊಂಡಿದೆ’ ಎಂದು ಹೇಳಿದ್ದಾರೆ.
ಸಾಹಿತ್ಯದ ವಿಶಿಷ್ಟತೆ ಕುರಿತ ಹಿರಿಯರ ಬರೆಹಗಳು ಇಲ್ಲಿ ನಿರೂಪಿಸಿದ ಕೆಲ ಅಂಶಗಳಿವೆ. ಕಥೆಕೂಟಕ್ಕಾಗಿ. ಕಥೆಕೂಟ ಕಥೆಗಾರರ ಮತ್ತು ಕಥಾ ಪ್ರೇಮಿಗಳ ವಾಟ್ಸಾಪ್ ವೇದಿಕೆ. ಹಿರಿಕಿರಿಯರ ಸಮ್ಮಿಲನದ ಸಾಹಿತ್ಯ ಗೋಷ್ಠಿ ಅದು. ಅಲ್ಕಲಿ ಬರೆದಿದ್ಥೆದು ಹೂಬಾಣ’ ಎಂದಿದ್ದಾರೆ.
ಜಗದೀಶ ಶರ್ಮಾ ಸಂಪ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸಂಪ ಗ್ರಾಮದವರು. ತಂದೆ - ಚಿದಾನಂದ ಭಟ್ಟ, ತಾಯಿ- ಮಂಗಳಗೌರಿ. ಗೋಕರ್ಣದ ಶ್ರೀದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣಯಜುರ್ವೇದ ಕ್ರಮಾಂತ ಅಧ್ಯಯನ ಮಾಡಿದ್ದಾರೆ. ಆನಂತರ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ಪಾಠಶಾಲೆಯಲ್ಲಿ ಅಲಂಕಾರಶಾಸ್ತ್ರದಲ್ಲಿ ವಿದ್ವತ್ ಪದವಿ, ಅದ್ವೈತ ವೇದಾಂತ, ನ್ಯಾಯವೈಶೇಷಿಕ, ಸಾಂಖ್ಯಯೋಗ ಧರ್ಮಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಎರಡು ಬಾರಿ ಸ್ವರ್ಣಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ವೇದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಕೃತಿ ಪರಿಚಯಿಸುವ, ನೈತಿಕಮೌಲ್ಯಗಳನ್ನು ...
READ MORE