ಇಂತಿ ನಿನ್ನ ಬಾಪು

Author : ರಾಜಶೇಖರ ಮಠಪತಿ (ರಾಗಂ)

Pages 168

₹ 100.00




Year of Publication: 2012
Published by: ಕಣ್ವ ಪ್ರಕಾಶನ
Address: ನಂ.11/26, 10 ನೇ 'ಡಿ' ಕ್ರಾಸ್ 2 ನೇ ಹಂತ, ಮಹಾಲಕ್ಷ್ಮಿಪುರಂ, ಬೆಂಗಳೂರು -560086
Phone: 8023426778

Synopsys

‘ಇಂತಿ ನಿನ್ನ ಬಾಪು’ ಕೃತಿಯು ರಾಜಶೇಖರ ಮಠಪತಿ (ರಾಗಂ) ಅವರ ಗಾಂಧಿ ಕುರಿತ ಬರಹಗಳನ್ನೊಳಗೊಂಡ ಲೇಖನ ಸಂಕಲನವಾಗಿದೆ. ಗಣ್ಯವ್ಯಕ್ತಿಗಳು ಬರೆದ ಪತ್ರಗಳು ಸಂಗ್ರಹಗೊಂಡು ಪುಸ್ತಕರೂಪದಲ್ಲಿ ಇಲ್ಲಿ ಪ್ರಕಟವಾಗಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಸಮಕಾಲೀನರಿಗೆ ಅಂದು ಬರೆದ ಪತ್ರಗಳ ಸಾರಾಂಶ, ಅವು ಕೇವಲ 'ವಿಷಯ ತಿಳಿಸುವ ಪತ್ರಗಳಾಗಿರದೆ, ಕಿವಿಮಾತುಗಳ ರೂಪದಲ್ಲಿ ನೀಡಿದ ಅನುಭವದ ಮಾತುಗಳು ಮಾತ್ರವಲ್ಲದೆ ಉಪದೇಶದ ನುಡಿಗಳೂ ಆಗಿವೆ ಎನ್ನುವುದನ್ನು ಇಲ್ಲಿ ಅರಿಯಬಹುದು. ಶ್ರೇಷ್ಠ ಮೌಲ್ಯಗಳನ್ನೂ ಅವು ಒಳಗೊಂಡಿವೆ. ಎಂಥ ಕ್ರೂರ ಮನಸ್ಸನ್ನೂ ತಿಳಿಗೊಳಿಸುವ, ತಪ್ಪು ಎಸಗಿದವನ ಮನಸ್ಸು ಪರಿವರ್ತನೆಗೊಳ್ಳುವಂಥ ಶಕ್ತಿ ಆ ಮಾತುಗಳಲ್ಲಿರುತ್ತಿತ್ತು. ಬಾಪೂ ಪತ್ರಗಳೆಂದರೆ ಅವು ಅತ್ಯುತ್ತಮ ಜೀವನ ಪಾಠಗಳಾಗಿದ್ದುವು. ಆ ಸಾರಾಂಶಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Reviews

(ಹೊಸತು, ನವೆಂಬರ್ 2013, ಪುಸ್ತಕದ ಪರಿಚಯ)

ಇಂತೀ... ನಿನ್ನ ಬಾಪು - ಇದು ಸಾಮಾನ್ಯವಾಗಿ ಪತ್ರಗಳ ಮುಕ್ತಾಯಕ್ಕೆ ಇರುವ ಒಂದು ಸೊಲ್ಲು. ಇಂದಿನ ಮೊಬೈಲ್ ಸಂಸ್ಕೃತಿಯಲ್ಲಿ ಪತ್ರ ಬರೆಯುವುದು, ಉತ್ತರ ಬರುವುದು ಹೆಚ್ಚು ಕಡಿಮೆ ನಿಂತು ಹೋಗಿದೆಯೆಂದೇ ತಿಳಿಯಲಡ್ಡಿ ಇಲ್ಲ. ಸುಮಾರು ಅರ್ಧ ಶತಮಾನದ ಹಿಂದೆ ಇವೆಲ್ಲ ಅವರ ಮಾವ ಅನಿವಾರ್ಯವೇ ಆಗಿತ್ತು. ಪುಟಗಟ್ಟಲೆ ಪತ್ರ ಬರೆಯುವ ಹವ್ಯಾಸವೂ ಇತ್ತು. ಪತ್ರಲೇಖನವೊಂದು ಕಲೆ. ಸ್ವಹಸ್ತಾಕ್ಷರ ಮತ್ತು ಸಹಿಯೊಂದಿಗೆ ಅಂಚೆಯಲ್ಲಿ ಬರುವ ಪತ್ರಗಳ ಹಾದಿಕಾಯುತ್ತಾ ಎಷ್ಟೋ ವೇಳೆ ಚಡಪಡಿಸುತ್ತಿದ್ದುದೂ ಉಂಟು. ಪ್ರಪಂಚದಾದ್ಯಂತ ವಿಶೇಷ ಗೌರವ ಪತ್ರಗಳಿಗೆ ಇತ್ತು. ಗಣ್ಯವ್ಯಕ್ತಿಗಳು ಬರೆದ ಪತ್ರಗಳು ಸಂಗ್ರಹಗೊಂಡು ಪುಸ್ತಕರೂಪದಲ್ಲಿ ಪ್ರಕಟವಾದದ್ದೂ ಇದೆ. ಇಲ್ಲಿ ಸಂಗ್ರಹಗೊಂಡ ವಿಚಾರಗಳು ಮಹಾತ್ಮಾ ಗಾಂಧೀಜಿಯವರು ತಮ್ಮ ಸಮಕಾಲೀನರಿಗೆ ಅಂದು ಬರೆದ ಪತ್ರಗಳ ಸಾರಾಂಶ, ಅವು ಕೇವಲ 'ವಿಷಯ ತಿಳಿಸುವ ಪತ್ರಗಳಾಗಿರದೆ.

ಕಿವಿಮಾತುಗಳ ರೂಪದಲ್ಲಿ ನೀಡಿದ ಅನುಭವದ ಮಾತುಗಳು ಮಾತ್ರವಲ್ಲದೆ ಉಪದೇಶದ ನುಡಿಗಳೂ ಆಗಿವೆ. ಶ್ರೇಷ್ಠ ಮೌಲ್ಯಗಳನ್ನೂ ಅವು ಒಳಗೊಂಡಿವೆ. ಎಂಥ ಕ್ರೂರ ಮನಸ್ಸನ್ನೂ ತಿಳಿಗೊಳಿಸುವ, ತಪ್ಪು ಎಸಗಿದವನ ಮನಸ್ಸು ಪರಿವರ್ತನೆಗೊಳ್ಳುವಂಥ ಶಕ್ತಿ ಆ ಮಾತುಗಳಲ್ಲಿರುತ್ತಿತ್ತು. ಬಾಪೂ ಪತ್ರಗಳೆಂದರೆ ಅವು ಅತ್ಯುತ್ತಮ ಜೀವನ ಪಾಠಗಳಾಗಿದ್ದುವು. ಆ ಸಾರಾಂಶಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.

 

Related Books