ಶಿಲ್ಪ ರೇಖೆ

Author : ಕನಕಾಮೂರ್ತಿ

Pages 160

₹ 200.00




Year of Publication: 2015
Published by: ಉದಯ ಪ್ರಕಾಶನ
Address: 11ನೇ ’ಎ’ ಮುಖ್ಯ ರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 8762144241

Synopsys

‘ಶಿಲ್ಪ ರೇಖೆ’ ಕೃತಿಯು ಕನಕಾಮೂರ್ತಿ ಅವರ ರೇಖಾ ಚಿತ್ರಗಳು, ಶಿಲ್ಪ ಮತ್ತು ಲೇಖನಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಚ್.ಎನ್. ಸುರೇಶ್ ಅವರು, ಸುಮಾರು 150 ಶಿಲ್ಪರೇಖಾ ಚಿತ್ರಗಳನ್ನು ಹಾಗೂ ಆ ಚಿತ್ರಶಿಲ್ಪ ರಚನೆಗಳ ಹಿನ್ನೆಲೆಯನ್ನೂ ನಮಗೆ ಈ ಪುಸ್ತಕದಲ್ಲಿ ಲೇಖಕಿ ಒದಗಿಸಿ ಕೊಟ್ಟಿದ್ದಾರೆ. ಇಲ್ಲಿಯ ಎಲ್ಲ ರೇಖೆಗಳೂ ಶಿಲ್ಪಗಳಾಗಿವೆ. ಎಲ್ಲಾ ಶಿಲ್ಪಗಳು ರೇಖಾ ವಿನ್ಯಾಸಗಳ ಜೀವಕಳೆಯಿಂದ ಕೂಡಿವೆ. ಇವು ಈ ಪುಸ್ತಕದಲ್ಲಿ ಕೇವಲ ಶಿಲ್ಪರೇಖೆಗಳಾಗಿ ಉಳಿದಿಲ್ಲ. ಇದನ್ನು 'ಕನಕರೇಖೆ'ಗಳೆಂದು ಕರೆದರೆ ಬಹುಶಃ ಹೆಚ್ಚು ಅರ್ಥಪೂರ್ಣವಾದೀತು. ಒಳ್ಳೆಯ ರೇಖಾಚಿತ್ರಗಳೇ ಶಿಲ್ಪಕಲೆಗೆ ಜೀವಾಳವಷ್ಟೆ? ಜೀವಂತಿಕೆಯ ಶಿಲ್ಪಗಳಿಗೆ ಇವು ಆಧಾರ ಎಂಬುದು ನಿರ್ವಿವಾದ ಎಂದಿದ್ದಾರೆ. ಈ ಪುಸ್ತಕದಲ್ಲಿಯ ಅನೇಕ ಪಾರಂಪರಿಕ ರೇಖಾಚಿತ್ರಗಳು, ಸಮಕಾಲೀನ ಸ್ಪಂದನಗಳು ಜೊತೆಜೊತೆಗೆ ಸೃಷ್ಟಿಗೊಂಡಿರುವುದು ಸಹ ಕನಕಾಮೂರ್ತಿಯವರ ಪ್ರತಿಭೆಯನ್ನು ದಿಟ್ಟವಾಗಿ ಪರಿಚಯಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಅವರಲ್ಲಿನ ಸೃಜನಶೀಲತೆ ಹಾಗೂ ಸಮಯಸ್ಪೂರ್ತಿ ಅವರು ನಂಬಿದ ಸಿದ್ಧಾಂತಗಳಿಗೆ ಬದ್ಧತೆಯನ್ನು ತೋರುವ ಸರಳ ಮನೋಭಾವ. ಪುಸ್ತಕದ ಪ್ರತಿಯೊಂದು 'ಶಿಲ್ಪ' ಪುಟಗಳನ್ನು ನೋಡುತ್ತಾ ಹೋದಂತೆ ಪ್ರತಿಯೊಂದು ಶಿಲ್ಪ ರೇಖಾಚಿತ್ರವೂ ತನ್ನ ಚಿತ್ರ ವ್ಯಾಕರಣವನ್ನು ಮೀರಿದ ಅರ್ಥಗಳನ್ನು ನೀಡುತ್ತಾ ಹೋಗುತ್ತದೆ. ಉದಾಹರಣೆಗೆ ಕನಕಾಮೂರ್ತಿಯವರ ರಾಗಮಾಲಿಕಾ ಶಿಲ್ಪರೇಖೆಗಳು, ಅಮೃತಮಂಥನ, ವಾದ್ಯಗಾರರು, ಮುಂತಾದ ಶಿಲ್ಪಚಿತ್ರಗಳನ್ನು ಅಂದರೆ ಇಂಥ ಶಿಲ್ಪರೇಖೆಗಳಿಂದಾಚೆ ಚಿಂತಿಸುವ ಹಾಗೂ ಚರ್ಚಿಸುವ ಅವಕಾಶಗಳು ಸಹ ಓದುಗರಿಗೆ ಅದಮ್ಯ ನೋಡುಗರಿಗೆ ಈ ಪ್ರಕಟಣೆಯ ಮೂಲಕ ದೊರೆಯುತ್ತದೆ. ಈ ಪುಸ್ತಕವು ಮತ್ತೊಂದು ದೃಷ್ಟಿಯಲ್ಲಿಯೂ ವಿಶೇಷವಾಗಿ ಗಮನಾರ್ಹ. ಇಂದಿನ ಯುವಶಿಲ್ಪಿಗಳಿಗೆ ಚಿತ್ರ ರಚನಾಕ್ರಮದ ಬಗ್ಗೆಯಾಗಲೀ ಇಲ್ಲವೇ ಮಾರ್ಗದರ್ಶನ ನೀಡುವುದಕ್ಕೆ ನಮ್ಮಲ್ಲಿ ಹೆಚ್ಚಿನ ಪುಸ್ತಕಗಳಿಲ್ಲ. ಆದ್ದರಿಂದ, ಈ ಮಸ್ತಕ ಅವರಿಗೆ ಒಂದು ವಿಶೇಷ ಕೊಡುಗೆಯಾಗಿದೆ ಎಂದಿದ್ದಾರೆ.

About the Author

ಕನಕಾಮೂರ್ತಿ

ಕನಕಾಮೂರ್ತಿ ಮೂಲತಃ ನರಸೀಪುರದವರು. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದಿರುವ ಅವರು, 1974 ರಲ್ಲಿ ಡಿಪ್ಲೊಮಾ ಇನ್ ಕ್ಲೇಮಾಡಲಿಂಗ್ ನಲ್ಲಿ ಪರಿಣತಿ ಹೊಂದಿದ್ದಾರೆ. 1965 ರಿಂದ 1993 ರವರೆಗೆ ಕರ್ನಾಟಕದ ಪ್ರಸಿದ್ದ ಶಿಲ್ಪಿ ಶ್ರೀವಾದಿರಾಜರಲ್ಲಿ ಸಾಂಪ್ರದಾಯಿಕ ಶಿಲ್ಪತರಬೇತಿಯನ್ನು ಪಡೆದಿದ್ದಾರೆ. 1994ರಲ್ಲಿ ಚಾಲುಕ್ಯ ಶೈಲಿಯಲ್ಲಿ ಗಜಾಸುರಮರ್ದನ, 1996ರಲ್ಲಿ ಚಾಲುಕ್ಯ ಶೈಲಿಯಲ್ಲಿ ಗಣೇಶ, 1996ರಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ. 2000 ರಲ್ಲಿ ಒಂಭತ್ತು ಅಡಿಯ ಬೃಹತ್ ಗಣೇಶಶಿಲ್ಪ, 2001 ರಲ್ಲಿ ಗಣೇಶ-ಸರಸ್ವತಿ ರೂಪಣೆ, 2003 ರಲ್ಲಿ ಮಿಥಿಕ್ ಸೊಸೈಟಿಗಾಗಿ ಹೊಯ್ಸಳ ರಾಜವಂಶದ ಲಾಂಛನವನ್ನು ಫೈಬರ್ ಗ್ಲಾಸಿನಿಂದ ಮಾಡಿದ್ದಾರೆ. ...

READ MORE

Related Books