ಕಲಬುರಗಿಯ ಮಹಿಬೂಬಶಾಹಿ ಗುಲ್ಶನ್ ಮೈದಾನದಲ್ಲಿ ಕೆಲ ಅಡಿಗಳಷ್ಟೇ ಅಗಲ ನೆರಳಿರುವ ಛಾವಣಿಯಡಿ ಸುಮಾರು 20 ವರ್ಷಗಳ ಹಿಂದೆ ಸ್ವಂತ ಖರ್ಚಿನಲ್ಲಿ ಲೇಖಕ-ಪತ್ರಕರ್ತ ಸುಭಾಷ ಬಣಗಾರ ಅವರು ತಮ್ಮದೇ ಪರಿಕಲ್ಪನೆಯೊಂದಿಗೆ (2000) ಆರಂಭಿಸಿದ ‘ಬಯಲು ಗ್ರಂಥಾಲಯ’ ಈಗ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ.
ಓದಿನ ಅವಶ್ಯಕತೆ, ಗ್ರಂಥಾಲಯದ ಮಹತ್ವ ಮತ್ತು ಬಗೆಗಳು, ಬರವಣಿಗೆಗೊಂದು ಬಯಲು ಗ್ರಂಥಾಲಯ ಹೀಗೆ ಪ್ರಮುಖ ಶೀರ್ಷಿಕೆಗಳಡಿ ಬಯಲು ಗ್ರಂಥಾಲಯ ನಡೆದ ಬಂದ ಮಾರ್ಗದ ಪರಿಚಯ ನೀಡಿದ ಈ ಕೃತಿಯನ್ನು ಗುಲಬರ್ಗಾ ವಿ.ವಿ. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ (2012) ಪ್ರಕಟಿಸಿದೆ.
ಪತ್ರಕರ್ತ, ಲೇಖಕ ಸುಭಾಷ ಬಣಗಾರ ಅವರು 1970 ಜೂನ್ 01 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರುಕ್ಮಾಪುರದಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ‘ಈ ಸಂಭಾಷಣೆ, ಬಯಲು ಗ್ರಂಥಾಲಯ, ಸಂಯುಕ್ತ ಬರಹ’ ಹಾಗೂ ‘ಮಾಧ್ಯಮ ವರ್ಗ’-ಇವು ಅವರ ಕೃತಿಗಳು. ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕಲಬುರಗಿ ಮೀಡಿಯಾ ಟ್ರಸ್ಟ್ ಪ್ರಶಸ್ತಿ, ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’ ಮುಂತಾದವುಗಳಿಗೆ ಭಾಜನರಾಗಿದ್ಧಾರೆ. ಸದ್ಯ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ...
READ MORE