ನೆಲದ ನಂಟು ಪುಸ್ತಕದಲ್ಲಿ ಒಟ್ಟೂ ಮೂವತ್ನಾಲ್ಕು ಪರಿಸರಾಸಕ್ತರ ಕುರಿತು ಲೇಖನಗಳಿವೆ. ಸಾರ್ವಜನಿಕ ಶೌಚಾಲಯ ಕಟ್ಟಿ ಸ್ವಂತ ಲಾಭ ಪಡೆದುಕೊಂಡ ದಯಾನಂದರು, ಬತ್ತದ ಮೇಲೆ ಬತ್ತದ ಪ್ರೀತಿ ತೋರುವ ಕೈಲಾಸಮೂರ್ತಿಗಳು, ವೃಕ್ಷಾಧಾರಿತ ಕೃಷಿಕ ಬಸವನಗೌಡಾ ಪಾಟೀಲ , ರೇಷ್ಮೆ ಬೆಳೆಗಾರ ಬಸವರಾಜ,-ಚನ್ನಪ್ಪನವರು, ... ಹೀಗೆ ವಿವಿಧ ಬಗೆಯ ಇಪ್ಪತ್ತೆರಡು ಕೃಷಿಕರ ಯಶೋಗಾಥೆಗಳು ಈ ಹೊತ್ತಿಗೆಯಲ್ಲಿವೆ.. ಕೈತೋಟ ಮಾಡಿ ನಗರದ ಬದುಕನ್ನು ಸುಗಮವಾಗಿಸಿಕೊಂಡ ಹನ್ನೆರಡು ಕೈತೋಟಿಗರ ಬದುಕಿನ ದರ್ಶನವಿದೆ. ಇಂತಹ ಸಾಧಕರನ್ನು ಅವರ ಕ್ಷೇತ್ರದಲ್ಲಿಯೇ ಭೇಟಿ ಮಾಡಿ ವಿವರಗಳನ್ನೂ ಪಡೆದು ನಂಟು ಪುಸ್ತಕದಲ್ಲಿ ವಿವರಿಸಲಾಗಿದೆ. ಕೃಷಿ ಲಾಭ ನಷ್ಟಗಳ ಲೆಕ್ಕಾಚಾರವಲ್ಲ. ಅದು ಜೀವನ ವಿಧಾನ ಎಂದು ಬಿಂಬಿಸುತ್ತಾ ತೋಟ ಕೈತೋಟ ಮಾಡುವವರಿಗೆ ಸ್ಪೂರ್ತಿ ತುಂಬುವ ಪುಸ್ತಕ ಇದು.
ಮಾಲತಿ ಹೆಗಡೆ ಮೂಲತಃ ಉತ್ತರ ಕನ್ನಡದವರು. ಸದ್ಯಕ್ಕೆ ಮೈಸೂರು ನಿವಾಸಿ. ಬಿ. ಎ ಪದವೀಧರೆ. ಹಾಡುವುದು ಬರೆಯುವುದು, ಓದುವುದು, ಕೈತೋಟದಲ್ಲಿ ಗಿಡಗಳನ್ನು ಬೆಳೆಸುವುದು ಪ್ರೀತಿಯ ಹವ್ಯಾಸ. ಪ್ರಜಾವಾಣಿಯಲ್ಲಿ 'ವಿಭಿನ್ನ ನೋಟ ವಿಶಿಷ್ಟ ತೋಟ' 'ಮನೆ ಊಟ ಮನೆ ಮದ್ದು' 'ದೇಸಿ ಅಡುಗೆ'..ಅಂಕಣ ಬರಹ ಪ್ರಕಟವಾಗಿದೆ. ವಿಜಯವಾಣಿಯಲ್ಲಿ 'ಸಾಂಗತ್ಯ' ಅಂಕಣ ಬರಹ ಪ್ರಕಟವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಕರ್ಮವೀರ ಸುಧಾ...ಇವುಗಳಲ್ಲಿ ಕೃಷಿ, ಪರಿಸರ, ಮಹಿಳೆಯರ ಕುರಿತಾದ ಲೇಖನಗಳು, ಕಥೆ, ಕವಿತೆ, ಗಜಲ್ಗಳು ಪ್ರಕಟವಾಗಿವೆ. 'ವನಿತೆಯರ ಆತ್ಮಶ್ರೀ'( ಸಾಧಕಿಯರ ಬಗ್ಗೆ ಬರೆದ ಅಂಕಣಬರಹಗಳ ಸಂಗ್ರಹ) 'ನೆಲದ ...
READ MORE