ಜನಪದ ಅಡುಗೆ ಉದ್ಯಮೀಕರಣ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಲೇಖನಗಳ ಸಂಕಲನ ಇದು. ಅತ್ತೆ ಮನೆಗೂ ಬಂದೆಯಾ ಜಡೆ ಶಂಕರಾ, ಸ್ಥಳೀಯ ತಿನಿಸುಗಳು ಔದ್ಯಮೀಕರಣ, ಕೆಲವು ಪ್ರಾಸ್ತಾವಿಕ ಟಿಪ್ಪಣಿಗಳು, ಜನಪದ ಅಡುಗೆ ವಾಣಿಜ್ಯೀಕರಣ: ಸಂಶೋಧನೆ ಅಗತ್ಯ, ಮಲೆನಾಡಿನ ಘನರೂಪದ ಅಡುಗೆಗಳು, ಮಲೆನಾಡಿನ ದ್ರವರೂಪದ ಆಹಾರಗಳು, ಅಡುಗೆ ಮನೆಯನ್ನು ಒಡೆದು ಬರಲೇ ಬೇಕಲ್ಲವೇ!, ಬಯಲು ನಾಡಿನ ದ್ರವ ರೂಪದ ಆಹಾರಗಳು, ಬಯಲು ನಾಡಿನ ಜನಪದ ಘನರೂಪದ ಆಹಾರ ಮತ್ತು ಉದ್ಯಮೀಕರಣ, ಬಯಲು ಸೀಮೆಯ ಅಡುಗೆ ಕ್ರಮ: ಒಂದು ನೋಟ, ಜನಪದ ಅಡುಗೆ ಸಂಶೋಧನಾ ಸಾಮಗ್ರಿ ಆಗಬೇಕು, ಜನಪದ ಅಡುಗೆ ಮತ್ತು ಔದ್ಯಮೀಕರಣ, ಮುಂತಾದ ಲೇಖನಗಳು ಈ ಕೃತಿಯಲ್ಲಿವೆ.
ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. ...
READ MORE