ಅವರವರ ಭವಕ್ಕೆ ಓದುಗರ ಭಕುತಿಗೆ

Author : ಕೆ. ಸತ್ಯನಾರಾಯಣ

Pages 216

₹ 210.00




Year of Publication: 2021
Published by: ಪರಸ್ಪರ ಪ್ರಕಾಶನ
Address: ಚಿಕ್ಕನಹಳ್ಳಿ, ಸುಳುಕೆರೆ ಪೋಸ್ಟ್, ಬೆಂಗಳೂರು-560060
Phone: 8884151513

Synopsys

ಖ್ಯಾತ ಲೇಖಕ ಕೆ. ಸತ್ಯನಾರಾಯಣ ಅವರ ’ಅವರವರ ಭವಕ್ಕೆ ಓದುಗರ ಭಕುತಿಗೆ’ ಕೃತಿಯು ಖ್ಯಾತನಾಮ ಲೇಖಕರ ಆತ್ಮಕಥನಗಳ ಪರಿಶೀಲನಾತ್ಮಕ ಬರಹಗಳನ್ನು ಒಳಗೊಂಡಿದೆ. ಬರಹಗಾರರಾದ ಸಿದ್ಧಲಿಂಗಯ್ಯ, ಪೂರ್ಣಚಂದ್ರ ತೇಜಸ್ವಿ, ಲಂಕೇಶ, ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಎಸ್. ಎಲ್. ಭೈರಪ್ಪ, ಗೋಪಾಲಕೃಷ್ಣ ಅಡಿಗ ಅವರ ಆತ್ಮಚರಿತೆಯ ಅಂಶಗಳನ್ನು ವಿಶ್ಲೇಷಿಸಲಾಗಿದೆ. ಈ ಕೃತಿಯಲ್ಲಿ ಚಿಂತಿಸಿದ ಕೆಲವು ತಾತ್ವಿಕ ಪ್ರಶ್ನೆಗಳು ಆತ್ಮಕಥನವನ್ನು ಕುರಿತಂತೆ ಬಹುಮುಖ್ಯವಾದಂತಹ ಆಯಾಮಗಳನ್ನು ಪರಿಶೀಲಿಸುತ್ತವೆ. ಇಲ್ಲಿ ಚರ್ಚಿತವಾದ ಐದು ಜನರ ಆತ್ಮಕಥನಗಳು ಸುರಗಿ, ಹುಳಿಮಾವಿನಮರ, ಆಡತಾಡತ ಆಯುಷ್ಯ, ಊರುಕೇರಿ, ಮತ್ತು ಅಡಿಗರ ಬರಹ, ಲೇಖಕರು ತಮ್ಮ ಸೃಜನಶೀಲ ಬರಹವನ್ನು ಮುಗಿಸಿದ ನಂತರ ಬರೆದ ಅನುಬಂಧದ ರೀತಿಯಂತೆ ಇವೆ. ತಮ್ಮ ಬದುಕಿನ, ಬರಹದ ಹಾಗೂ ಘಟನೆಗಳ ಮೆಲುಕು ಇಲ್ಲಿ ಪ್ರಧಾನವಾಗಿ ಕಾಣುತ್ತದೆ. ಒಂದು ಬಗೆಯ ಸೃಜನಾತ್ಮಕ ತಣಿವು ಆವರಿಸಿದ ಬರವಣಿಗೆ ಇದಾಗಿದ್ದು, ಬರವಣಿಗೆಯ ಸುತ್ತಲು ಹೆಣೆದಿರುವ ಘಟನೆಗಳು ನೆನಪುಗಳಾಗಿ ಸುತ್ತುತ್ತವೆ. ಈ ಕೃತಿಯಲ್ಲಿ, ಆಯ್ದುಕೊಂಡ ಬರಹಗಾರರ ಆತ್ಮಕಥನಗಳು ಮುಂದಿನ ತಲೆಮಾರುಗಳಿಗೆ ಸೇರಿದ ಬರಹಗಾರರದ್ದು ಹಾಗೂ ಬಹುಪಾಲು ತಮ್ಮ ಸೃಜನಶೀಲ ಬರವಣಿಗೆಯ ಕೊನೆಯ ಹಂತದ ಸಂದರ್ಭದಲ್ಲಿ ಅವರಿಂದ ರೂಪುಗೊಂಡವುಗಳಾಗಿವೆ. ’ಅವರವರ ಭವಕ್ಕೆ’ ಎನ್ನುವ ಈ ಪುಸ್ತಕದ ಶೀರ್ಷಿಕೆಯೂ ಸಾಂಕೇತಿಕವಾಗಿದ್ದು, ಕೊನೆಗೂ ನಿಮ್ಮನ್ನು ನೋಡಿಕೊಳ್ಳಬೇಕಾದವರು ನೀವೇ. ಬದುಕನ್ನು ಬದುಕಿದರೆ ನೋಡಿಕೊಳ್ಳಲು ಸಾಧ್ಯವಿದೆ’ ಎಂಬ ಅಂಶಗಳು ಒಳಗೊಂಡಿವೆ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books